ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

ಇಸ್ಲಾಮಾಬಾದ್: ಪಂಜ್‌ಗುರ್‌ನಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (BLA) ಹೇಳಿಕೊಂಡಿದ್ದು, ಮೇ 9 ರ ದಾಳಿಯ ಪೂರ್ತಿ ವೀಡಿಯೊ ಬಿಡುಗಡೆ ಮಾಡಿದೆ.

‘ಆಪರೇಷನ್ ಹೆರೋಫ್’ ಕಾರ್ಯಾಚರಣೆ ನಡೆಸಿದ ಬಲೂಚಿಸ್ತಾನ, ಪಾಕಿಸ್ತಾನ ಸೇನೆಯ 14 ಸೈನಿಕರನ್ನು ಹತ್ಯೆ ಮಾಡಿತ್ತು. ಮೇ 9 ರಂದು ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಗುಂಡು ನಿರೋಧಕ ವಾಹನ ನಾಶವಾಯಿತು. ಒಳಗಿದ್ದ ಎಲ್ಲಾ 14 ಸೈನಿಕರು ಸಾವನ್ನಪ್ಪಿದರು. ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲಿನ ದಾಳಿಯ ವೀಡಿಯೊವನ್ನು ಬಿಎಲ್‌ಎ ಬುಧವಾರ ಬಿಡುಗಡೆ ಮಾಡಿದೆ. ಇದನ್ನು ನಾವೇ ಮಾಡಿರುವುದಾಗಿ ದೃಢಪಡಿಸಿದೆ. ಇದನ್ನೂ ಓದಿ: ‘ಆಪರೇಷನ್‌ ಸಿಂಧೂರ’ ಏಟಿಗೆ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಓಡಿದೆ: ಪೆಂಟಗನ್‌ ಮಾಜಿ ಅಧಿಕಾರಿ ವ್ಯಂಗ್ಯ

ಬಲೂಚ್ ಲಿಬರೇಶನ್ ಆರ್ಮಿಯ ವಕ್ತಾರ ಜೀಯಂಡ್ ಬಲೂಚ್ ಪತ್ರಿಕಾ ಪ್ರಕಟಣೆಯಲ್ಲಿ, ಬಿಎಲ್‌ಎ ಸ್ವಾತಂತ್ರ್ಯ ಹೋರಾಟಗಾರರು ಕ್ವೆಟ್ಟಾ ಮತ್ತು ಮಸ್ತುಂಗ್‌ನಲ್ಲಿ ಪಾಕಿಸ್ತಾನಿ ಸೈನ್ಯ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪಾಕ್‌ ಸರ್ಕಾರ ಮತ್ತು ಆಕ್ರಮಿತ ರಾಜ್ಯದ ಆಶ್ರಯದಲ್ಲಿ ಅದರ ಆಚರಣೆಯನ್ನು ಬಿಎಲ್ಎ ಗುರಿಯಾಗಿಸಿಕೊಂಡಿದೆ. ಬಲೂಚ್ ವಿಮೋಚನಾ ಚಳುವಳಿಯು ಸಾರ್ವಜನಿಕ ಬೆಂಬಲದೊಂದಿಗೆ ಬಲವಾದ ರೂಪವನ್ನು ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌