ಶಿವಮೊಗ್ಗದಲ್ಲಿ ಹಿಂಸಾಚಾರ, ಶಾಲಾ- ಕಾಲೇಜುಗಳಿಗೆ ರಜೆ: ಸೋಮವಾರ ನಡೆದಿದ್ದು ಏನು?

ಶಿವಮೊಗ್ಗ: ಹಿಜಬ್ ವಿಚಾರದಲ್ಲಿ ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿರುವ ಸಂದರ್ಭದಲ್ಲೇ ಉರಿವ ಬೆಂಕಿಗೆ ಪೆಟ್ರೋಲ್ ಸುರಿಯುವಂತಹ ಘಟನೆ ಕೋಮು ಸೂಕ್ಷ್ಮ ಶಿವಮೊಗ್ಗದಲ್ಲಿ ನಡೆದಿದೆ. ಭಾನುವಾರ ರಾತ್ರಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆಯಿಂದ ಶಿವಮೊಗ್ಗ ನಗರ ಇವತ್ತು ಇಡೀ ಕೋಮು ದಳ್ಳುರಿಯಲ್ಲಿ ಬೆಂದಿದೆ.

ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆ ಲೆಕ್ಕಿಸದೇ ಮೃತನ ಮೆರವಣಿಗೆ ನಡೆಸಿದ ಉದ್ರಿಕ್ತರು, ಮಾರ್ಗಮಧ್ಯೆ ಪ್ರಚೋದನೆಗೆ ಒಳಗಾಗಿ ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದಾರೆ. ಕೆಲವರು ಪೊಲೀಸರ ಮುಂದೆಯೇ ಮಾರಕಾಸ್ತ್ರ ಝಳಪಿಸಿದ್ದಾರೆ. ದೊಣ್ಣೆ ಎತ್ತಿ ಶೋ ತೋರಿಸಿದ್ದಾರೆ.

ಮಚ್ಚು, ಲಾಂಗ್ ಝಳಪಿಸಿ ಪ್ರಚೋದನೆ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಉದ್ರ್ರಿಕ್ತರು ಸಿಕ್ಕ ಸಿಕ್ಕ ಮನೆ, ಅಂಗಡಿಗಳಲ್ಲಿ ದಾಂಧಲೆ ನಡೆಸಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

ಸಚಿವ ಈಶ್ವರಪ್ಪ ನೇತೃತ್ವ ವಹಿಸಿದ್ದ ಶವದ ಮೆರವಣಿಗೆ ವೇಳೆಯೂ, ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ. ಹರ್ಷ ಅಂತ್ಯಕ್ರಿಯೆ ವೇಳೆಯೂ ಕಲ್ಲು ತೂರಾಟವಾಗಿದೆ. ಮೆರವಣಿಗೆಯುದ್ದಕ್ಕೂ ನಡೆದ ಹಿಂಸಾಚಾರಕ್ಕೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದು ವಿಪರ್ಯಾಸ.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿ ಒಮ್ಮೆ ಆಶ್ರುವಾಯು ಕೂಡ ಪ್ರಯೋಗ ಮಾಡಿದರು. ಭಾನುವಾರ ರಾತ್ರಿಯಿಂದ ಶುರುವಾದ ಗಲಭೆ, ಈವರೆಗೂ ಪೂರ್ಣ ಪ್ರಮಾಣದಲ್ಲಿ ತಹಬದಿಗೆ ಬಂದಿಲ್ಲ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತೆ ಇದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ನಡೆದಿದ್ದು ಏನು?
ಮೃತ ಯುವಕನ ಅಂತಿಮ ಮೆರವಣಿಗೆ ಸಾಗುತ್ತಿದ್ದ ಉದ್ರಿಕ್ತರಿಂದ ಕಟ್ಟಡ, ಅಂಗಡಿಗಳಿಗೆ ಕಲ್ಲುತೂರಾಟ ನಡೆದಿದೆ. ಮೆರವಣಿಗೆ ವೇಳೆ ಮುಸ್ಲಿಮ್ ಪತಾಕೆ ಹಾರಿಸಿದ್ದರಿಂದ ಯುವಕರು ಪ್ರಚೋದನೆ ಒಳಗಾಗಿ ಮೆರವಣಿಗೆ ವೇಳೆಯೇ ಹಿಂಸೆ, ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ಹಿಜಬ್‌ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್‌ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ

ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್ ರಸ್ತೆಯಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಆಶ್ರುವಾಯು ಪ್ರಯೋಗ ನಡೆಯಿತು.

ಆಜಾದ್ ನಗರದಲ್ಲಿ ಬೈಕ್, ಕಾರುಗಳು ಧ್ವಂಸಗೊಂಡಿದ್ದು, ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅಂಗಡಿಯತ್ತ ಉದ್ರಿಕ್ತರು ಕಲ್ಲು ತೂರಿದ್ದರಿಂದ ಗಾಜುಗಳು ಪುಡಿ ಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಬೈಕ್ ಹೊತ್ತಿ ಉರಿದಿದೆ.

ಜಲ್ಲಿಕಲ್ಲು ತುಂಬಿದ ಲಾರಿಯಿಂದ ಉದ್ರಿಕ್ತರು ಕಲ್ಲುಗಳನ್ನು ಎಸೆದಿದ್ದಾರೆ. ಮನೆಗೆ ನುಗ್ಗಿ ಅಟ್ಟಹಾಸ, ಫ್ರಿಡ್ಜ್, ಬೀರು ಜಖಂಗೊಂಡಿದ್ದು ಕಾರುಗಳ ಗಾಜುಗಳು ಪುಡಿಪುಡಿಯಾಗಿದೆ. ಪೊಲೀಸರ ಮುಂದೆಯೇ ದೊಣ್ಣೆ ಪ್ರದರ್ಶನ ನೀಡಿದ್ದು ಮಚ್ಚು, ಲಾಂಗ್ ಹಿಡಿದು ಕೊಟ್ಟಿದ್ದಾರೆ.

ಹಣ್ಣಿನ ತಳ್ಳುಗಾಡಿ ಧ್ವಂಸವಾಗಿದ್ದು ಕಲ್ಲುತೂರಾಟದ ವೇಳೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *