ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

ಟಾಲಿವುಡ್ ನಟ ಪ್ರಭಾಸ್ (Prabhas)  ಬಗ್ಗೆ ಸದಾ ಎದುರಾಗುವ ಪ್ರಶ್ನೆ ಎಂದರೆ ಮದುವೆ ಮ್ಯಾಟರ್. ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ನಟನ ಕಡೆಯಿಂದ ಗುಡ್ ನ್ಯೂಸ್ ಬರಲಿ ಅಂತ ಎದುರು ನೋಡ್ತಿದ್ದಾರೆ. ಹೀಗಿರುವಾಗ ಬಗ್ಗೆ ಮದುವೆ (Wedding) ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

ಪ್ರಭಾಸ್ ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ನಾನು ಈಗಲೇ ಮದುವೆ ಆಗೋದಿಲ್ಲ, ನನಗೆ ಮಹಿಳಾ ಅಭಿಮಾನಿಗಳನ್ನು ನೋಯಿಸಲು ಮನಸ್ಸಿಲ್ಲ ಎಂದು ಹೇಳಿದ್ದಾರೆ. ನಟನ ಹೇಳಿಕೆಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಸದ್ಯ ಪ್ರಭಾಸ್ ‘ಕಲ್ಕಿ 2898 ಎಡಿ’ (Kalki 2898 AD)  ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನ ಆಗುತ್ತಿದೆ ಎಂದು ಹೇಳಿ, ಸಿನಿಮಾದಲ್ಲಿನ ‘ಬುಜ್ಜಿ’ ಎಂಬ ಕಾರಿನ ಬಗ್ಗೆ ಪ್ರಭಾಸ್ ಮಾಹಿತಿ ನೀಡಿದ್ದರು. ಬುಜ್ಜಿ ಎಂದಾಕ್ಷಣ ಎಲ್ಲರೂ ಪ್ರಭಾಸ್, ಬಾಳ ಸಂಗಾತಿಯನ್ನು ಪರಿಚಯಿಸುತ್ತಾರೆ ಎಂದೇ ಭಾವಿಸಿದ್ದರು. ಆದರೆ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಗಿಮಿಕ್ ಮಾಡಿತ್ತು.

ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್ ಕೂಡ ನಟಿಸಿದ್ದಾರೆ. ಸಿನಿಮಾದ ವಿಶೇಷ ಏನೆಂದರೆ, ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.