ಬಾಗಲಕೋಟೆ: ಬಾದಾಮಿ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ನನಗೆ ಹಣೆ ಮೇಲೆ ನಾಮ(ತಿಲಕ) ಇಟ್ಟವರನ್ನ ಕಂಡರೆ ಭಯವಾಗುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಕಿಚಾಯಿಸಿದ್ದಾರೆ.
ಭಾಷಣದ ವೇಳೆ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದರು. ಸಿದ್ದರಾಮಯ್ಯ ಅವರ ಈ ಮಾತಿಗೆ ಕಾರ್ಯಕ್ರಮದಲ್ಲಿ ಇದ್ದ ಕಾರ್ಯಕರ್ತರು ನಕ್ಕು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಶೂ ಧರಸಿಯೇ ಪೂಜೆ:
ಇದಕ್ಕೂ ಮುನ್ನ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡುವ ವೇಳೆಯೂ ಗಡಿಬಿಡಿ ಮಾಡಿದ ಸಿದ್ದರಾಮಯ್ಯನವರು, ಮಂತ್ರ ಹೇಳಿ, ಕಾಯಿ ಒಡೆಯಲು ಬಿಡದೆ ಪೂಜಾರಿ ಕಿರಿಕಿರಿ ಮಾಡಿದ್ದು ಕಂಡು ಬಂತು. ಪೂಜಾ ಸ್ಥಳಕ್ಕೆ ಆಗಮಿಸುತ್ತಿದಂತೆಯೇ ಗಡಿಬಿಡಿ ಮಾಡಿದ ಅವರು, ‘ಮುಗಿಸಯ್ಯ. ಬೇಗ ಮುಗಿಸಯ್ಯ. ಹೇ ನೀನೇ ಕಾಯಿ ಒಡಿ. ಹೇ ತಾರಯ್ಯ ಇಲ್ಲಿ ಗುದ್ದಲಿ… ಎಂದು ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಶೂ ಧರಿಸಿಯೇ ಪೂಜೆಯಲ್ಲಿ ಭಾಗವಹಿಸಿದ್ರು.
ಇದೇ ವೇಳೆ ಕ್ಷೇತ್ರದ ಜನರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಆಶ್ವಾಸನೆ ನೀಡಿದ ಸಿದ್ದರಾಮಯ್ಯ ಅವರು, ನಾನು ಕ್ಷೇತ್ರಕ್ಕೆ ಬಾರದೆ ಇದ್ದರು ಗೆಲ್ಲಿಸಿಕೊಟ್ಟಿದ್ದೀರಿ, ಬೇರೆ ಕ್ಷೇತ್ರದ ಶಾಸಕರು ಎಷ್ಟು ಕೆಲಸ ಮಾಡುತ್ತಾರೋ ಅದಕ್ಕಿಂತ 10 ರಷ್ಟು ಕೆಲಸ ಮಾಡಿ ತೋರಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸುವುದೇ ನಮ್ಮ ಗುರಿ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply