ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್

ಬಾಗಲಕೋಟೆ: ಹಾಲ್ನೊರೆಯಂತೆ ಬೀಳುತ್ತಿರೋ ನೀರು. ರೋಗಗಳಿಂದ ಮುಕ್ತಿ ಹೊಂದೋಕೆ ರಾಮ ಬಾಣದಂತಿರೋ ಮಿನಿ ಜಲಪಾತ ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದಲ್ಲಿದೆ. ಇಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗುತ್ತೇವೆ ಎಂಬುವುದು ಸ್ಥಳೀಯರ ಬಲವಾದ ನಂಬಿಕೆ. ಹಾಗಾಗಿ ಪ್ರತಿಬಾರಿಯೂ ಈ ಜಲಪಾತ ತುಂಬಿದಾಗ ಬಹುತೇಕರು ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.

ದಮ್ಮೂರು ಗ್ರಾಮದ ಹೊರವಲಯದಲ್ಲಿರುವ ದಿಡಿಗಿನ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಈ ಜಲಪಾತವಿದೆ. ಬೆಟ್ಟದ ಮಧ್ಯೆ ವಿವಿಧ ಗಿಡಬಳ್ಳಿಗಳ ಮಧ್ಯೆ ನುಸುಳಿ ಬರುವ ನೀರು ಮಿನಿ ಜಲಪಾತವಾಗಿದೆ. ಬೆಟ್ಟದಲ್ಲಿ ಬೇರುಗಳ ಮಧ್ಯೆ ನೀರು ಬರೋದ್ರಿಂದ ಇದು ಔಷಧೀಯ ಗುಣ ಹೊಂದಿದೆ. ಹಾಗಾಗಿ ಇಲ್ಲಿ ಸ್ನಾನ ಮಾಡಿದರೆ ರೋಗಗಳು ಗುಣಮುಖವಾಗುತ್ತೇವೆ ಎಂದು ಸ್ಥಳೀಯರಾದ ರಮೇಶ್ ಶಾಂತಗೇರಿ ಹೇಳುತ್ತಾರೆ.

ದೂರದ ಊರುಗಳಿಂದ ಈ ಮಿನಿ ಜಲಪಾತ ನೋಡಲು ಕುಟುಂಬ ಸಹಿತ ಜನರು ಆಗಮಿಸ್ತಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಹೊಂದಿದ್ದರಿಂದ ಬೆಳಗಾದರೆ ಈ ಮಿನಿ ಜಲಪಾತದಲ್ಲಿ ಜನರು ಸ್ನಾನ ಮಾಡಲು ಬರುತ್ತಾರೆ. ಸ್ನಾನದ ಬಳಿಕ ಬಸವೇಶ್ವರನ ದರ್ಶನ ಪಡೆಯಯುತ್ತಾರೆ. ಈ ಮಿನಿ ಫಾಲ್ಸ್ ನೀರು ಹರಿದು ಹೋಗಿ ಪಕ್ಕದಲ್ಲಿರುವ ಕೆರೆಗೆ ಸೇರುತ್ತದೆ. ಇದೊಂದು ನಮ್ಮಂತಹ ಜನರಿಗೆ ಬಡವರ ಫಾಲ್ಸ್ ಆಗಿದೆ ಎಂದು ಪ್ರವಾಸಿಗರು ಹೇಳುತ್ತಾರೆ.

Comments

Leave a Reply

Your email address will not be published. Required fields are marked *