ಬಾಗಲಕೋಟೆ: ಸಾಲಮನ್ನಾ ವಿಚಾರವಾಗಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಾಮಾಜಿಕ ಜಾಲತಾಣದ ಬಾಗಲಕೋಟೆ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ನಾಶಿ ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ.
ಬಾಗಲಕೋಟೆ ನಗರಸಭೆ ಮಾಜಿ ಸಭಾಪತಿಯಾಗಿರುವ ಬಸವರಾಜ ನಾಶಿ ನಗ್ನ ಚಿತ್ರದ ಫೋಟೋ ಹಾಕಿ ಕಮೆಂಟ್ ಮಾಡಿದ್ದಾರೆ. ಸಾಲಮನ್ನಾ ಬಗ್ಗೆ ಥಿಯೇಟರ್ ನಲ್ಲಿ ಸಿಎಂ ಜಾಹೀರಾತು ಹಾಕುತ್ತಿದ್ದಾರೆ. ಸಾಲ ಮನ್ನಾ ಆಯ್ತಾ ಎಂದು ಬಸವರಾಜ ನಾಶಿ ಜಾಹೀರಾತು ಚಿತ್ರದ ಪೋಸ್ಟ್ ಹಾಕಿದ್ದಾರೆ.

ಇನ್ನು ಈ ಪ್ರಶ್ನೆಗೆ ಯಂಕನಗೌಡ ಪಾಟೀಲ್ ಎಂಬವರು ಆಯಿತು ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ನಾಶಿಯವರು, ನಗ್ನ ಚಿತ್ರದ ಭಾವಚಿತ್ರ ಹಾಕಿ ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ನಿಮ್ಮ ಕೈಯಲ್ಲಿ ಇದನ್ನೇ ಕೊಟ್ಟಿದ್ದಾನೆ ಎಂದು ನಗ್ನ ಫೋಟೋ ಹಾಕಿ ತಮ್ಮ ಉದ್ಧತಟತನ ಮೆರೆದಿದ್ದಾರೆ. ಆದ್ರೆ ಕೆಲ ಹೊತ್ತಿನಲ್ಲೇ ಬಸವರಾಜ ನಾಶಿ ತಮ್ಮ ಈ ಅಶ್ಲೀಲ ಪೋಸ್ಟ್ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply