ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ನಡೆದಾಡಿದ ವೈರಲ್ ವಿಡಿಯೋ ನೋಡಿದ್ರಾ?- ಅದಕ್ಕೆ ಕಾರಣ ಇಲ್ಲಿದೆ

ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವೊಂದು ನಡೆದಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬ್ರೆಜಿಲ್‍ನ ನಿವಾಸಿಯಾದ ಅರ್ಲೆಟ್ ಅರೆಂಟಿಸ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಮೇ 26 ರಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿರುವ ಈ 41 ಸೆಕೆಂಡ್‍ಗಳ ವಿಡಿಯೋ ಈಗಾಗಲೇ 7 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 16 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.

ನವಜಾತ ಮಗು ನರ್ಸ್ ಸಹಾಯದಿಂದ ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ಮತ್ತೊಂದನ್ನು ಮೇಲೆತ್ತುತ್ತಾ ನಡೆದಾಡಿದಿದೆ.

ಆದ್ರೆ ಈ ವಿಡಿಯೋದಲ್ಲಿ ಮಗು ನಡೆದಿರುವುದು ದೊಡ್ಡ ಪವಾಡವೇನಲ್ಲ ಎಂದು ಹೇಳಲಾಗಿದೆ. ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಪ್ರಕಾರ, ಈ ನಡಿಗೆ ಪವಾಡವೇನಲ್ಲ. ಇದೊಂದು ನೈಸರ್ಗಿಕವಾದ ನವಜಾತ ಪ್ರತಿಫಲನ. ಇದನ್ನ ಸ್ಟಪ್ಪಿಂಗ್ ರಿಫ್ಲೆಕ್ಸ್ ಅಂತಾರೆ. ಮಗುವಿನ ಕಾಲು ನೆಲಕ್ಕೆ ಅಥವಾ ಯಾವುದೇ ಘನ ಮೇಲ್ಮೈಗೆ ಮುಟ್ಟುವಂತೆ ಅದನ್ನ ಎತ್ತಿ ಹಿಡಿದುಕೊಂಡಾಗ ಮಗು ನಡೆದಾಡುವಂತೆ ಅಥವಾ ಕುಣಿಯವಂತೆ ತೋರುವುದರಿಂದ ಇದನ್ನ ವಾಕಿಂಗ್ ಅಥವಾ ಡ್ಯಾನ್ಸ್ ರಿಫ್ಲೆಕ್ಸ್ ಎಂದು ಕೂಡ ಕರೆಯುತ್ತಾರೆ. ಮಗುವಿಗೆ 2 ತಿಂಗಳು ತುಂಬುವವರೆಗೆ ಈ ರಿಫ್ಲೆಕ್ಸ್ ಇರುತ್ತದೆ. ಮಗುವಿನ ಬೆಳವಣಿಗೆಗೆ ಇದು ಸಹಕಾರಿ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಈ ವಿಡಿಯೋ ಮೇಲೆ ಈಗ ಮೀಮ್ಸ್ ಗಳು ಕೂಡ ಹರಿದಾಡ್ತಿದೆ. ಮಗುವಿನ ಹೆಸರು ಉಸೇನ್ ಬೋಲ್ಟ್ ಅಂತ ಕೆಲವರು ಜೋಕ್ ಮಾಡಿದ್ದಾರೆ.

https://www.facebook.com/arlete.arantes.94/videos/336828263402719/

 

Comments

Leave a Reply

Your email address will not be published. Required fields are marked *