ಗಂಡು ಮಗುವಿಗೆ ತಂದೆಯಾದ ಶಾಹಿದ್ ಕಪೂರ್

ಮುಂಬೈ: ಬಾಲಿವುಡ್ ಚಾಕಲೇಟ್ ಹೀರೋ ಶಾಹಿದ್ ಕಪೂರ್ ಬುಧವಾರ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಮೀರಾ ರಜಪೂತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದ ಮೀರಾ ರಜಪೂತ್ ಸಂಜೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಯಲ್ಲಿ ಮೀರಾ ತಾಯಿ ಬೇಲಾ ರಜಪೂತ್, ಅತ್ತೆ ನೀಲಿಮಾ ಅಜಿಮ್, ಶಾಹಿದ್ ಸೋದರ ಇಶಾನ್ ಖಟ್ಟರ್ ಎರಡೂ ಕುಟುಂಬದ ಸದಸ್ಯರು ಗಂಡು ಮಗವನ್ನು ಸ್ವಾಗತಿಸಿದ್ದಾರೆ.

ಶಾಹಿದ್ ಮತ್ತು ಮೀರಾ ಜುಲೈ 6, 2015ರಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಶಾಹಿದ್ ಮತ್ತು ಮೀರಾ ಬಾಲಿವುಡ್ ಅಂಗಳದಲ್ಲಿ ಬಹು ಚರ್ಚೆಗೆ ಒಳಗಾದ ಜೋಡಿ ಅಂತಾನೇ ಕರೆಸಿಕೊಳ್ಳುವುದುಂಟು. ಮೀರಾ 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ತಮ್ಮ ಹೆಸರಿನ ಮೊದಲ ಅಕ್ಷರ ಸೇರಿದಿ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು. ಶಾಹಿದ್ ಸದ್ಯ ‘ಬತ್ತಿ ಗುಲ್ ಮೀಟರ್ ಚಾಲು’ ಸಿನಿಮಾದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *