ಆರೈಕೆ ಪಡೆದು ಅಧಿಕಾರಿಗಳನ್ನ ರಂಜಿಸಿದ ಕರಡಿ ಮರಿ- ವಿಡಿಯೋ ವೈರಲ್

ಶಿಮ್ಲಾ: ಕರಡಿ ಮರಿಯೊಂದು ಹಿಮಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ಆಟವಾಡಿ, ಅವರನ್ನು ರಂಜಿಸಿ, ಮಗುವಿನಂತೆ ಆರೈಕೆ ಪಡೆದುಗೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

ಶಿಮ್ಲಾ ಸಮೀಪದ ಥಿಯೋಗ್‍ನ ಉಪವಿಭಾಗೀಯ ಮ್ಯಾಜೆಸ್ಟ್ರೇಟ್ ಅಧಿಕಾರಿಗಳ ಕಚೇರಿಯಲ್ಲಿ ಈ ಕರಡಿ ಕಾಣಿಸಿಕೊಂಡಿದ್ದು, ತನ್ನ ತಮಾಷೆ ವರ್ತನೆ ಮೂಲಕ ಅವರನ್ನು ರಂಜಿಸಿ, ಅವರಿಂದ ಆರೈಕೆ ಪಡೆದು ಮತ್ತೇ ಅರಣ್ಯ ಇಲಾಖೆ ಸಿಬ್ಬಂದಿ ಕೈ ಸೇರಿದೆ.

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಕೊಟ್ ಖೈ ಪ್ರದೇಶದದಲ್ಲಿ ಇತ್ತೀಚೆಗೆ ಕಾಡಿಗೆ ಬೆಂಕಿ ತಗುಲಿತ್ತು. ಈ ವೇಳೆ ಅಧಿಕಾರಿಗಳು ಕರಡಿ ಮರಿಯೊಂದನ್ನು ರಕ್ಷಣೆ ಮಾಡಿದ್ದು, ಅದನ್ನು ತಮ್ಮ ಮಗುವಿನಂತೆ ಕಾಳಜಿವಹಿಸಿ ಆರೈಕೆ ಮಾಡಿದ್ದಾರೆ. ಅದರೊಂದಿಗೆ ಆಟವಾಡುತ್ತಿರುವ ದೃಶ್ಯಗಳನ್ನು ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ಕರಡಿ ಮರಿಯು ಪುಟ್ಟ ಮಗುವಿನಂತೆ ಒಂದು ಚೇರ್ ನಿಂದ ಮತ್ತೊಂದು ಚೇರ್ ಗೆ ದಾಟುವುದು, ರ್ಯಾಕ್‍ಗೆ ಕಾಲುಕೊಟ್ಟು ಏನನ್ನೊ ಹುಡುಕುವುದು, ಬಿದ್ದು ಹೊರಳಾಡಿ ನಟಿಸುತ್ತಿರುವ ದೃಶ್ಯಗಳು ನೋಡುಗರಿಗೆ ಖುಷಿ ನೀಡುತ್ತಿದೆ.

https://twitter.com/Sanjays98977803/status/1001663615840075776

Comments

Leave a Reply

Your email address will not be published. Required fields are marked *