ಇಸ್ಲಾಮಾಬಾದ್: ಟಿ20 ವಿಶ್ವಕಪ್‌ನಲ್ಲಿ (T20 World) ಇಂಗ್ಲೆಂಡ್ ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ (England) ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ (Test Cricket) 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಯಿತು.

ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯಿಂದ ಬೆನ್‌ಸ್ಟೋಕ್ಸ್ (Ben Stokes) ಪಡೆ ಪಾಕಿಸ್ತಾನ ತಂಡವನ್ನು ತವರಿನಲ್ಲೇ ವೈಟ್‌ವಾಶ್ ಮಾಡಿತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಪಾಕ್ ತಂಡ, ಭಾರೀ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ (Danish Kaneria) ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪಾಕಿಸ್ತಾನ ತಂಡದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ದೊಡ್ಡ ಸೊನ್ನೆ. ಅವರನ್ನು ವಾಸ್ತವವಾಗಿ ವಿರಾಟ್ ಕೊಹ್ಲಿಗೆ (Virat Kohli) ಹೋಲಿಸೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್ – ಇಂಗ್ಲೆಂಡ್ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್

ಜನರು ಬಾಬರ್ ಅಜಮ್‌ನನ್ನ ವಿರಾಟ್ ಕೊಹ್ಲಿ ಅವರಿಗೆ ಹೋಲಿಸೋದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹವರು ಬಹಳ ದೊಡ್ಡ ಆಟಗಾರರು. ಅವರಿಗೆ ಹೋಲಿಸುವಂತಹವರು ಪಾಕ್ ತಂಡದಲ್ಲಿ ಯಾರೂ ಇಲ್ಲ. ನೀವು ಅವರನ್ನ ಮಾತನಾಡಲು ಕೇಳಿದ್ರೆ ಹಾಜರಾಗುತ್ತಾರೆ. ಅದೇ ಫಲಿತಾಂಶ ನೀಡಲು ಕೇಳಿದ್ರೆ ಶೂನ್ಯವಾಗಿರುತ್ತದೆ ಎಂದು ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಬರ್ ನಾಯಕನಾಗಿ ದೊಡ್ಡ ಶೂನ್ಯ, ತಂಡವನ್ನು ಮುನ್ನಡೆಸಲು ಅರ್ಹರಲ್ಲ. ಮುನ್ನಡೆಸುವ ಸಾಮರ್ಥ್ಯವನ್ನೂ ಅವರು ಹೊಂದಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ಬಂದಾಗ ಬೆನ್‌ಸ್ಟೋಕ್ಸ್ ನೋಡಿ ಕಲಿಯಬೇಕಿದೆ. ಇನ್ನು ಮುಂದೆ ಬಾಬರ್ ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಆಡುವುದು ಸೂಕ್ತವಲ್ಲ ಎಂದು ಕನೇರಿಯಾ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

Leave a Reply