ಸರ್ಪದೋಷ ಪರಿಹಾರ ಮಾಡ್ತೀನೆಂದು, ಮಹಿಳೆ ಬಾಯಿಗೆ ಬಟ್ಟೆ ತುರುಕಿ ಆಶ್ರಮದಲ್ಲೇ ರೇಪ್ ಮಾಡಿದ ಬಾಬಾ!

ಜೈಪುರ: ರಾಜಸ್ಥಾನದ ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದಲ್ಲಿರುವ ಆಶ್ರಮ ಇದಾಗಿದ್ದು, ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿದೆ. ಆದರೆ ಕಾಳಸರ್ಪ ದೋಷ ನಿವಾರಣೆಯ ಹೆಸರಿನಲ್ಲಿ ಆಶ್ರಮದ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಅಲ್ಲದೆ ಬಾಬಾ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆಯೂ ಒತ್ತಡ ಹೇರುತ್ತಿದ್ದ ಎಂದು ಹೇಳಲಾಗಿದೆ. 108 ದಿನದಲ್ಲಿ ನೀನು ನನ್ನ ಜೊತೆ 21 ಬಾರಿ ಸಂಬಂಧ ಬೆಳೆಸಬೇಕು. ಇದರಿಂದ ನಿನ್ನ ಕಾಳಸರ್ಪ ದೋಷ ನನ್ನ ಮೇಲೆ ಬರುತ್ತದೆ ಎಂದೆಲ್ಲಾ ಕಥೆ ಕಟ್ಟಿದ್ದಾನೆ. ಆದರೆ ಈ ಕ್ರಮ ಆಕೆಗೆ ಇಷ್ಟವಿರಲಿಲ್ಲವೆಂದೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಲಾರಿ ಹರಿದು 10 ವರ್ಷದ ಬಾಲಕ ದುರ್ಮರಣ- ರೊಚ್ಚಿಗೆದ್ದ ಜನ ಮಾಡಿದ್ದೇನು?

ಸಂತ್ರಸ್ತೆ ಅಂಚೆ ಮೋಲಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜುಲೈ 27ರಂದು ಪೊಲೀಸರು ಈ ಪತ್ರವನ್ನು ಪಡೆದುಕೊಂಡಿದ್ದು, ಜುಲೈ 28ರ ರಾತ್ರಿ 10 ಗಂಟೆ ಸುಮಾರಿಗೆ ಎಫ್‌ಐಆರ್ ದಾಖಲಿಸಿದ್ದಾರೆ. 32 ವರ್ಷದ ಸಂತ್ರಸ್ತೆ ಜಲೋರ್‌ನ ಚಿಟಲ್ವಾನಾ ತಹಸಿಲ್ ನಿವಾಸಿ ಎಂದು ಸಂಚೋರ್‌ನ ಸರ್ವಾನಾ ಪೊಲೀಸ್ ಠಾಣೆಯ ಉಸ್ತುವಾರಿ ಕಿಷ್ಣರಾಮ್ ಬಿಷ್ಣೋಯ್ ಹೇಳಿದ್ದಾರೆ.

ಜಲೋರ್‌ನ ಮಾನವ ಸೇವಾ ವಿಶ್ವ ಗುರು ಭಗವಾನ್ ದತ್ತಾತ್ರೇಯ ಆಶ್ರಮದ ಬಾಬಾ ತಾಗಾರಾಮ್ ತನ್ನನ್ನು ಅತ್ಯಾಚಾರ ಮಾಡಿದ್ದು, ಅವರ ಸಹಾಯಕಿ ಸಾಧ್ವಿ ಹೇಮಲತಾ ಇದರ ವೀಡಿಯೋ ಮಾಡಿದ್ದಾರೆ. ರೇಪ್ ಮಾಡುವ ವೇಳೆ ಸಂತ್ರಸ್ತೆಯು ಚೀರಾಡುವಾಗ, ಸಾಧ್ವಿ ಆಕೆಯ ಬಾಯಿಗೆ ಬಟ್ಟೆ ತುರುಕುತ್ತಿದ್ದಳು ಎನ್ನುವ ವಿಷಯ ಬಹಿರಂಗವಾಗಿದೆ. ರಾಜಸ್ಥಾನದ ಜಲೋರ್‌ನ ಸಂಚೋರ್‌ನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಿಡ್-ಡೇ ಮೀಲ್ ಯೋಜನೆಯಿಂದ 11 ಕೋಟಿ ರೂ. ವಸೂಲಿ – ಪ್ರಾಂಶುಪಾಲರ ವಿರುದ್ಧ ಆರೋಪ

ಸಂತ್ರಸ್ತೆ ಜೋಧಪುರದಲ್ಲಿ ಅವರು ಕೆಲಸ ಮಾಡತ್ತಿದ್ದಾರೆ. ತನ್ನ ಪತಿ ಮತ್ತು ಅತ್ತೆಯಂದಿರು ದೇವತಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಕೆಯ ಪತಿ 2021ರಲ್ಲಿ ಸಂಚೋರ್‌ನ ಅರ್ವಾ ಜನೈಪುರ ಗ್ರಾಮದಲ್ಲಿನ `ಮಾನವ ಸೇವಾ ವಿಶ್ವ ಗುರು ದತ್ತಾತ್ರೇಯ ಆಶ್ರಮ’ಕ್ಕೆ ಕರೆತಂದಿದ್ದರು. ಇಲ್ಲಿ ಅವರು ಸಾಧ್ವಿ ಹೇಮಲತಾ ಮತ್ತು ಅವರ ಸಹೋದ್ಯೋಗಿ ತಾಗರಾಮ್ ಅವರನ್ನು ಭೇಟಿಯಾಗಿದ್ದರು.

ಹರಿದ್ವಾರದಲ್ಲಿ ಮೊದಲ ಬಾರಿಗೆ ರೇಪ್: ಆಶ್ರಮದ ಮೇಲಿನ ನಂಬಿಕೆ ಹೆಚ್ಚಾದಾಗ ನವೆಂಬರ್ 2021 ರಲ್ಲಿ ಸಂಸ್ಥೆಯ ಗುಂಪಿನೊಂದಿಗೆ ಮಹಿಳೆ ಹರಿದ್ವಾರಕ್ಕೆ ಹೋಗಿದ್ದರು. 2021ರ ನವೆಂಬರ್ 18 ರಂದು ಹರಿದ್ವಾರದಲ್ಲಿ, ತಾಗರಾಮ್ ರಾತ್ರಿಯ ವೇಳೆ ಮಹಿಳೆಯನ್ನು ಕೋಣೆಗೆ ಕರೆಸಿದ್ದರು. ಒಳಗೆ ಬಂದ ನಂತರ ಬಾಗಿಲನ್ನು ಹಾಕಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ಇದಾದ ನಂತರ ಹರಿದ್ವಾರದಲ್ಲಿ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಹೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ಆಕೆಯ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *