ಸಿಹಿ ಸುದ್ದಿ ನೀಡ್ತಿನಿ ಅಂದಿದ್ದ ಪ್ರಭಾಸ್ ಕೊಟ್ಟಿದ್ದು ರೋಮಾಂಚನದ ನ್ಯೂಸ್

ಹೈದರಾಬಾದ್: ಮಂಗಳವಾರ ಅಂದ್ರೆ ಇಂದು ಸಿಹಿ ಸುದ್ದಿ ಕೊಡುತ್ತೇನೆ ಅಂದಿದ್ದ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್, ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸಾಹೋ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಡಿದ್ದಾರೆ.

ಇಂದು ಬಾಹುಬಲಿ ಪ್ರಭಾಸ್ ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಸಾಹೋ ಚಿತ್ರ ತಂಡ ಸಿನಿಮಾದ ಆ್ಯಕ್ಷನ್ ಸೀನ್ ಗಳ ಮೇಕಿಂಗ್ ವಿಡಿಯೋ ಮತ್ತು ಡಾರ್ಲಿಂಗ್ ಪ್ರಭಾಸ್ ಹೊಸ ಲುಕ್ ರಿವೀಲ್ ಮಾಡುವ ಮೂಲಕ ಶುಭಕೋರಿದ್ದಾರೆ.

ಬಾಹುಬಲಿ ಚಿತ್ರದ ಬಳಿಕ ಸೆಟ್ಟೇರಿದ್ದ ಸಾಹೋ ಕೇವಲ ಎರಡು ಲುಕ್ ಗಳನ್ನು ಮಾತ್ರ ರಿವೀಲ್ ಮಾಡಿತ್ತು. ಬಾಹುಬಲಿ ಚಿತ್ರದ ಆರಂಭದಲ್ಲಿ ಮತ್ತು 2017ರ ಬರ್ತ್ ಡೇ ದಿನದಂದು ಎರಡು ಭಿನ್ನ ಲುಕ್ ನ್ನು ಪರಿಚಯಿಸಿತ್ತು. ಮೂರನೇ ಬಾರಿಗೆ ಮೇಕಿಂಗ್ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಾಹೋ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಅಕ್ಟೋಬರ್ 18ರಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಇದೇ ಮಂಗಳವಾರ ಎಲ್ಲರಿಗೂ ಗುಡ್ ನ್ಯೂಸ್ ನೀಡಲಿದ್ದೇನೆ ಅಂತಾ ಬರೆದುಕೊಂಡಿದ್ದರು. ಗುಡ್ ನ್ಯೂಸ್ ಅಂದ ಕೂಡಲೇ ಪ್ರಭಾಸ್ ಮದುವೆ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಮದುವೆ ಸುದ್ದಿಯನ್ನು ರಿವೀಲ್ ಮಾಡದ ಟಾಲಿವುಡ್ ರೆಬೆಲ್ ಸಾಹೋ ಝಲಕ್ ರಿಲೀಸ್ ಮಾಡಿದೆ.

ಇತ್ತ ಸ್ವೀಟಿ ಅನುಷ್ಕಾ ಶೆಟ್ಟಿ ರಾತ್ರಿಯೇ ಗೆಳೆಯನಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅನುಷ್ಕಾ ಮತ್ತು ನನ್ನ ಅಭಿಮಾನಿಗಳ ಪರವಾಗಿ ಪ್ರಭಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಮುಂದಿನ ಸಿನಿಮಾ ಸಾಹೋಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಶ್ರದ್ಧಾ ಕಪೂರ್ ಸಾಹೋ ಸಿನಿಮಾ ಫಸ್ಟ್ ಶೇಡ್‍ನ ವಿಡಿಯೋ ಲಿಂಕ್ ಟ್ಟಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/Anushka_ASF/status/1054381845087838208

Comments

Leave a Reply

Your email address will not be published. Required fields are marked *