ಹೈದರಾಬಾದ್: ನಾನು ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡು ಯಾವುದೇ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದು ಬಾಹುಬಲಿ ನಿರ್ದೇಶಕ ಎಸ್ ರಾಜಮೌಳಿ ಹೇಳಿದ್ದಾರೆ.

ಆಸ್ಕರ್ ರೇಸ್‍ನಲ್ಲಿ ಬಾಹುಬಲಿ ಭಾಗ 2 ಚಿತ್ರ ಆಯ್ಕೆ ಆಗದೇ ಇರುವ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ರಾಜಮೌಳಿ, ನಾನು ಪ್ರಶಸ್ತಿಗಾಗಿ ಸಿನಿಮಾವನ್ನು ಮಾಡುವುದಿಲ್ಲ. ಜನರಿಗೆ ಸಿನಿಮಾ ಅರ್ಥ ಆಗಬೇಕು ಮತ್ತು ಚಿತ್ರತಂಡಕ್ಕೆ ಒಳ್ಳೆಯ ಯಶಸ್ಸು ಸಿಗಲು ಮಾಡುತ್ತೇನೆ ಎಂದು ಉತ್ತರಿಸಿದರು.

ನಾನು ಸಿನಿಮಾ ಮಾಡುವಾಗ ಪ್ರಶಸ್ತಿಗಳ ಬಗ್ಗೆ ಯೋಚಿಸುವುದಿಲ್ಲ ಹಾಗೂ ಅದನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡುವುದಿಲ್ಲ. ಚಿತ್ರದ ಕಥೆ ನನಗೆ ಹಾಗೂ ಜನರಿಗೆ ತೃಪ್ತಿ ಆಗಬೇಕು. ಚಿತ್ರ ಉತ್ತಮವಾಗಿ ಓಡಿ ಹಣ ಗಳಿಸಬೇಕು ಅಷ್ಟೇ. ಚಿತ್ರಕ್ಕೆ ಪ್ರಶಸ್ತಿ ಬಂದರೆ ನನಗೆ ಖುಷಿಯಾಗುತ್ತಿತ್ತು. ಒಂದು ವೇಳೆ ಪ್ರಶಸ್ತಿ ಬಾರದೇ ಇದ್ದರೂ ನಾನು ಅದರ ಬಗ್ಗೆ ಯೋಚನೆ ಮಾಡುವುದೇ ಇಲ್ಲ ಎಂದು ರಾಜಮೌಳಿ ತಿಳಿಸಿದ್ದಾರೆ.

ಎರಡು ಚಿತ್ರದ ಅಂದಾಜು 150 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿತ್ತು ಎಂದು ರಾಜಮೌಳಿ ತಿಳಿಸಿದ್ದಾರೆ. ಬಾಹುಬಲಿ ಭಾಗ ಎರಡು ಬಾಕ್ಸ್ ಆಫೀಸ್ ನಲ್ಲಿ ಒಟ್ಟು 900 ಕೋಟಿ ರೂ. ಅಧಿಕ ಹಣವನ್ನು ಗಳಿಸಿದೆ.








Leave a Reply