47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಾಹುಬಲಿ’ ನಟ ಸುಬ್ಬರಾಜು

‘ಬಾಹುಬಲಿ’ (Baahubali) ಖ್ಯಾತಿಯ ನಟ ಸುಬ್ಬರಾಜು (Subbaraju) ಅವರು 47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯಾಗಿರುವ (Wedding) ಮಾಹಿತಿಯನ್ನು ನಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

ಪತ್ನಿ ಜೊತೆ ಬೀಚ್ ಬಳಿ ವಧು- ವರರ ಕ್ಯಾಸ್ಟೂಮ್‌ನಲ್ಲಿ ನಿಂತಿರುವ ಫೋಟೋ ಶೇರ್ ಮಾಡಿ, ‘ಕೊನೆಗೂ ಮದುವೆಯಾದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ತೆಲುಗು ಪದ್ಧತಿಯಂತೆ ಈ ಮದುವೆ ಜರುಗಿದೆ. ಹೊಸ ಜೋಡಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ.

 

View this post on Instagram

 

A post shared by Subba Raju (@actorsubbaraju)

ಇನ್ನೂ ಹಲವು ಸಿನಿಮಾದಲ್ಲಿ ಸುಬ್ಬರಾಜು ಅವರು ಖಳನಟನ ಪಾತ್ರದಲ್ಲಿ ಮಿಂಚಿದ್ದಾರೆ. ಮಿರ್ಚಿ, ಪೋಕರಿ, ಬಾಹುಬಲಿ, ಕುಮಾರವರ್ಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಗಜ, ನಮ್ಮಣ್ಣ, ಸತ್ಯ ಇನ್ ಲವ್, ಸಂಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಬ್ಬರಾಜು ನಟಿಸಿದ್ದಾರೆ.