ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

ಬೆಂಗಳೂರು: ಬಾಹುಬಲಿ ಭಾಗ- 2 ರಿಲೀಸ್ ಆದ ಬಳಿಕ ಡಾರ್ಲಿಂಗ್ ಪ್ರಭಾಸ್ ಯಾವಾಗ ಮದುವೆ ಆಗ್ತಾರೆ ಅನ್ನೋದೇ ದೊಡ್ಡ ಸುದ್ದಿಯಾಗ್ಬಿಟ್ಟಿದೆ. ಇತ್ತ ಬಾಹುಬಲಿಗೊಂದು ಹುಡುಗಿ ಹುಡುಕಿಕೊಡಿ ಅಂತಾ ರಾಣಾ ದಗ್ಗುಬಾಟಿ ಮ್ಯಾಟ್ರಿಮೋನಿಯಲ್ ಜಾಹೀರಾತು ಕೊಟ್ಟಿದ್ದಾರೆ.

36 ವರ್ಷದ ಗೌರವಾನ್ವಿತ ಕುಟುಂಬದ ಸೇನಾನಾಯಕ. ಮನೆ ಕೆಲಸದಲ್ಲಿ ಎಲ್ಲಾ ರೀತಿಯ ಸಹಾಯ ಮಾಡುತ್ತಾನೆ. ಮದುವೆಯ ಸಂಬಂಧ ಕಂಡುಬಂದರೆ ಬೆಟ್ಟವನ್ನೂ ಹತ್ತುವ ಸಮರ್ಥ. ಮೇಕ್ ಅಪ್ ಮಾಡುವುದು ಚೆನ್ನಾಗಿ ಗೊತ್ತು. ವಧುವಿಗೂ ಮೇಕ್ ಅಪ್ ಮಾಡಬಲ್ಲ ಎಂದು ಗೆಳೆಯನ ಗುಣಗಾನ ಮಾಡಿದ್ದಾರೆ.


ವರ ಗುಡ್ಡ, ಬೆಟ್ಟ ಹತ್ತಿ ಓಡಿ ಬರುವಷ್ಟು ವಧುವಿಗೆ ಸೌಂದರ್ಯವಿರಬೇಕು. ಶತ್ರುಗಳನ್ನು ಹೊಡೆದೋಡಿಸುವ ಸೇನಾ ಸಾಮರ್ಥ್ಯವಿರಬೇಕು. ತನ್ನ ಅತ್ತೆ ವನವಾಸಕ್ಕೆ ಕಳಿಸಿದ್ರೂ ಆಕೆಯನ್ನ ಗೌರವಿಸಬೇಕು. ಮನೆಗೆಲಸದ ಜತೆಗೆ ಮಿಲಿಟರಿ ತರಬೇತಿ ಹೊಂದಿರಬೇಕು ಎಂದು ಬೇಡಿಕೆಗಳ ಪಟ್ಟಿ ಮಾಡಿದ್ದಾರೆ. ಈ ಜಾಹೀರಾತನ್ನು ರಾಣಾ 2016ರಲ್ಲೇ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ಆನ್ ಸ್ಕ್ರೀನ್ ನಲ್ಲಿ ಎದುರು ಬದುರಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ ಪ್ರೇಕ್ಷಕರನ್ನು ಸೂರೆ ಮಾಡಿದ್ದ ಬಾಹುಬಲಿ ನಟರಾದ ಪ್ರಭಾಸ್ ಮತ್ತು ರಾಣಾ ದಗ್ಗುಬಾತಿ ಆಫ್ ಸ್ಕ್ರೀನ್ ನಲ್ಲಿ ಬೆಸ್ಟ್ ಫ್ರೆಂಡ್ಸ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ ರಾಣಾ ನಿಜ ಜೀವನದಲ್ಲಿ ಪ್ರಭಾಸ್ ಗೊಂದು ಹೆಣ್ಣು ಕೊಡಿ ಎಂದು ಟ್ವಿಟರ್ ನಲ್ಲಿ ತಮಾಷೆಯ ಜಾಹೀರಾತು ನೀಡಿರುವುದನ್ನು ಓದಿ ಅಭಿಮಾನಿಗಳು ನಗುತ್ತಿದ್ದಾರೆ.

Comments

Leave a Reply

Your email address will not be published. Required fields are marked *