ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್

ನಿನ್ನೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮಾ.ಹರೀಶ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ನಿರ್ಮಾಪಕ ಸಾ.ರಾ. ಗೋವಿಂದ್ ಮತ್ತುನಿರ್ಮಾಪಕ ಭಾ.ಮಾ.ಹರೀಶ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಭಾ.ಮಾ.ಹರೀಶ್ 403 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

ನಿನ್ನೆ ನಡೆದ  64ನೇ ವಾರ್ಷಿಕ ಚುನಾವಣೆಯಲ್ಲಿ ಸಾ.ರಾ.ಗೋವಿಂದ್ ಅವರಿಗೆ 378 ಮತಗಳು ಬಿದ್ದಿದ್ದರೆ, ಭಾ.ಮಾ.ಹರೀಶ್ ಅವರಿಗೆ 781 ಮತಗಳು ಬಂದಿವೆ. ಹೀಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆಯಾಗಿದ್ದಾರೆ. ಒಟ್ಟು ಶೇ.62 ರಷ್ಟು ಮತದಾನವಾಗಿದೆ. 1176 ವಾಣಿಜ್ಯ ಮಂಡಳಿಯ ಸದಸ್ಯರು ನಿನ್ನೆ ಮತದಾನ ಮಾಡಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ಅಂದಹಾಗೆ ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್, ವಿತರಕರ ವಲಯದಿಂದ ಉಪಾಧ್ಯಕ್ಷರಾಗಿ ಶಿಲ್ಪ ಶ್ರೀನಿವಾಸ್, ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ಹಿರಿಯ ನಟ ಸುಂದರ್ ರಾಜ್, ವಿತಕರ ವಲಯದಿಂದ ಕುಮಾರ್.ಎಂಎನ್, ಪ್ರದರ್ಶಕರ ವಲಯದಿಂದ ಕುಶಾಲ್ ಎಲ್.ಸಿ ಆಯ್ಕೆ ಯಾಗಿದ್ದಾರೆ.

Comments

Leave a Reply

Your email address will not be published. Required fields are marked *