ಸಿದ್ದರಾಮಯ್ಯ, ಹೆಚ್‍ಡಿಕೆಗೆ RSS ಸಂಸ್ಕಾರ ಗೊತ್ತಿಲ್ಲ: ಶ್ರೀರಾಮುಲು

– ಪಂಜಾಬ್ ನಲ್ಲಿಯೂ ಸಿದ್ದು ಇದ್ದಾನೆ, ಇಲ್ಲಿಯೂ ಸಿದ್ದು ಇದ್ದಾನೆ

ರಾಯಚೂರು: ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿಗೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ. ಆರ್‌ಎಸ್‌ಎಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಶ್ರೀ ರಾಮುಲು ವಿರೋಧ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲಾ ಪ್ರವಾಸದಲ್ಲಿರುವ ಶ್ರೀರಾಮುಲು ಆರ್‌ಎಸ್‌ಎಸ್ ಟೀಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಾಜಿ ಪ್ರಧಾನಿ ದೇವೇಗೌಡರು ಆರ್‌ಎಸ್‌ಎಸ್ ಬಗ್ಗೆ ಹೊಗಳುತ್ತಾರೆ. ಕಾಂಗ್ರೆಸ್ ಸರ್ಕಾರ ಏನಾದರೂ ಅಧಿಕಾರಕ್ಕೆ ಬಂದಿದ್ರೆ ತಾಲಿಬಾನ್ ನಲ್ಲಿ ಆಗುತ್ತಿದ್ದ ಪರಿಸ್ಥಿತಿ ರಾಜ್ಯದಲ್ಲಿಯೂ ಆಗುತ್ತಿತ್ತು. ಈಗ ಆರ್‌ಎಸ್‌ಎಸ್ ಇರುವ ಕಾರಣ, ಆರ್‍ಎಸ್‍ಎಸ್ ಸಂಸ್ಕøತಿ, ದೇಶ ಭಕ್ತಿ ಇರುವ ಕಾರಣ ಭಾರತ ಸುರಕ್ಷಿತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು, ಐಟಿ ದಾಳಿ ಆಗಿರುವುದು ಹೊಸದೇನು ಅಲ್ಲ. ಇಂದು ಅವರ ಮೇಲೆ ಆಗಿದೆ, ನಾಳೆ ಇನ್ನೊಬ್ಬರ ಮೇಲೆ ಆಗುತ್ತೆ ಎಂದರು.

ಬಿಜೆಪಿ ಕೊಲೆಗಡುಕ ಸರ್ಕಾರ ಅನ್ನೋ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಪಂಜಾಬ್ ನಲ್ಲಿಯೂ ಸಿದ್ದು ಇದ್ದಾನೆ, ಇಲ್ಲಿಯೂ ಸಿದ್ದು ಇದ್ದಾನೆ. ಪಂಜಾಬ್ ನಲ್ಲಿಯೂ ಕ್ಯಾಪ್ಟನ್ ಇದ್ದಾನೆ. ರಾಜ್ಯದಲ್ಲಿ ಸಿದ್ದು ಕ್ಯಾಪ್ಟನ್. ಪಂಜಾಬ್ ನಲ್ಲಿ ದಲಿತ ಸಿಎಂ ಆಗಿದ್ದಾರೆ, ರಾಜ್ಯದಲ್ಲಿಯೂ ದಲಿತ ಸಿಎಂ ಕೂಗು ಇದೆ. ಕಾಂಗ್ರೆಸ್ ನಲ್ಲಿ ಸಿಎಂಗಾಗಿ ಮೂರು ಸಮುದಾಯಗಳು ಕೂಗು ಇದೆ. ಒಂದು ದಲಿತ, ಕುರುಬ ಹಾಗೂ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಒಡೆದು ಮೂರು ಬಾಗಿಲು ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಚಿತವಾಗಿ 120 ದಿನಗಳಲ್ಲಿ 25 ಸಾವಿರ ಮಂದಿಗೆ ಕೋವಿಡ್ ಲಸಿಕೆ- ಶ್ರೀರಾಮ ಸೇವಾ ಮಂಡಳಿ

ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಬಗ್ಗೆ ನಾಗಮೋಹನ್ ದಾಸ್ ವರದಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಹಲವು ಸಮುದಾಯಗಳು ಹೋರಾಟ ನಡೆಸಿವೆ. ನಮ್ಮ ಬೇಡಿಕೆ ಹಳೆಯ ಬೇಡಿಕೆ ಆಗಿದೆ. ಅದಷ್ಟು ಶ್ರೀಘ್ರದಲ್ಲಿ ವರದಿ ತರಿಸಿಕೊಂಡು ಶೇ.7.5 ಮೀಸಲಾತಿ ನೀಡಲು ಯತ್ನಿಸುವೆ. ನಮ್ಮ ಸರ್ಕಾರ ಪ್ರತ್ಯೇಕ ಸಚಿವಾಲಯ ಮಾಡಿದೆ. ನಮ್ಮ ಸರ್ಕಾರವೇ ವಾಲ್ಮೀಕಿ ಜಯಂತಿ ಆಚರಣೆ ಶುರು ಮಾಡಿದ್ದು. ಶೇ.7.5 ಮೀಸಲಾತಿಗೆ ಕೆಲ ಕಾನೂನು ತೊಡಕು ಇವೆ. ಕಾನೂನು ತೊಡಕು ಸರಿಪಡಿಸಿ ಶೇ.7.5 ಮೀಸಲಾತಿಗೆ ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು.

RSS ಪರ ಹಾಗೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

Comments

Leave a Reply

Your email address will not be published. Required fields are marked *