7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ: ಶ್ರೀರಾಮುಲು

ಬೆಂಗಳೂರು: ಗ್ರಾಮಾಂತರ ಕ್ಷೇತ್ರದಲ್ಲಿ ಇರುವ ಸಾರಿಗೆ ಸಮಸ್ಯೆಯ ಕುರಿತಾಗಿ ಸದನ ಕಲಾಪದಲ್ಲಿ ಪ್ರಸ್ತಾಪವಾದಾಗ ಸಾರಿಗೆ ಸಚಿವ ಶ್ರೀರಾಮುಲು 7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ ಎಂದಿದ್ದಾರೆ.

ವಿಧಾನಸಭೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಇದೆ. ಶಾಲಾ- ಕಾಲೇಜು ಶುರುವಾಗಿದೆ, ಬಸ್ ಗಳ ಕೊರತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕೊರತೆ ಇದೆ ಎಂದು ಶಾಸಕ ಬಸನಗೌಡ ದದ್ದಲ್ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ ಬಸ್‍ಗಳನ್ನ ಹಾಕಿದ್ದೇವೆ, ಕೆಲ ಗ್ರಾಮಗಳಿಗೆ ಸಮಸ್ಯೆ ಆಗುತ್ತಿದೆ, ಸರಿಪಡಿಸುತ್ತೇವೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿಕೊಡುತ್ತೇವೆ. ಬಹಳಷ್ಟು ಕಡೆಗಳಲ್ಲಿ ಈ ಬಗ್ಗೆ ಮನವಿ ಮಾಡಿದಾಗ ಬಸ್ ಸೌಲಭ್ಯ ಕಲ್ಪಿಸಿದ್ದೇವೆ. ಅಗತ್ಯ ಇರುವ ಕಡೆ ಬಸ್‍ಗಳನ್ನ ಹಾಕುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರಾಜ್ಯದ ಎಲ್ಲಾ ಕಡೆ ಬೇಡಿಕೆಗೆ ಅನುಗುಣವಾಗಿ ಬಸ್‍ಗಳ ಸಂಚಾರ ವ್ಯವಸ್ಥೆ ಮಾಡಿದ್ದೇವೆ. ಆದ್ಯತೆ ಮೇರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. 7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *