ಕುಮಾರಸ್ವಾಮಿಗೆ ಗೊಂಬೆ ಆಡಿಸೋದು ಚನ್ನಾಗಿ ಗೊತ್ತು: ಶ್ರೀರಾಮುಲು

ಯಾದಗಿರಿ: ದೇವಗೌಡರು ದೇಶದ ರಕ್ಷಣೆಗಾಗಿ ಆರ್‍ಎಸ್‍ಎಸ್ ಬೇಕು ಅಂತಾರೆ. ಆದರೆ ಅವರ ಮಗ ಕುಮಾರಸ್ವಾಮೀ ಅವರು, ಐಎಎಸ್ ಅಧಿಕಾರಿಗಳು ಗೊಂಬೆಗಳ ತರಹ ಆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಗೊಂಬೆ ಆಡಿಸುವ ಕೆಲಸ ಕುಮಾರಸ್ವಾಮಿ ಅವರಿಗೆ ಚನ್ನಾಗಿ ಗೊತ್ತಿದೆ  ಅನ್ಸುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

RSS ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಗೊಂಬೆ ಆಟದ ಬಗ್ಗೆ ಸಾಕಷ್ಟು ಮಾಹಿತಿಯಿದೆ. ಅದಕ್ಕೆ ಅವರು ಆ ರೀತಿಯ ಹೇಳಿಕೆಗಳನ್ನ ಕೊಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ, ಕುಮಾರಸ್ವಾಮಿ ವೋಟಿಗಾಗಿ ಜೊಲ್ಲು ಸುರಿಸ್ತಿದ್ದಾರೆ: ಆರಗ ಜ್ಞಾನೇಂದ್ರ

ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿ, ಇಂದಿನಿಂದ ನಮ್ಮ ಪಕ್ಷದಿಂದ ಪ್ರಚಾರ ಆರಂಭವಾಗಿದೆ. ಎರಡೂ ಕ್ಷೇತ್ರದಲ್ಲಿ ಗೆಲುವು ನಮ್ಮದೇ. ನಮ್ಗೆ ಪೂರ್ಣ ವಿಶ್ವಾಸವಿದೆ ಎರಡು ಕ್ಷೇತ್ರದಲ್ಲಿ ನಾವು ಗೆಲವು ಸಾಧಿಸುತ್ತೆವೆ ಎಂದಿದ್ದಾರೆ.

ಮೊನ್ನೆ ನಡೆದ ಮಹಾ ನಗರ ಪಾಲಿಕೆ ಚುನಾವಣೆ ಫಲಿತಾಂಶದಂತೆ ಇಲ್ಲೂ ಕೂಡ ಗೆಲ್ಲುತ್ತೆವೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

Comments

Leave a Reply

Your email address will not be published. Required fields are marked *