ಯತ್ನಾಳ್ ಆರೋಪದ ಬಗ್ಗೆ ಟೀಕೆ ಮಾಡಲ್ಲ, ಎಲ್ಲಾ ಸರಿಯಾಗತ್ತೆ: ಬಿಎಸ್‍ವೈ

– ಸರ್ಕಾರದ ವೈಫಲ್ಯಕ್ಕೆ ಬಿಸಿ ಮುಟ್ಟಿಸಲು ಇಂದು ಪ್ರತಿಭಟನೆ

ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಪದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಾಗಲಿ, ಟೀಕೆ ಮಾಡುವುದಾಗಲಿ ಮಾಡುವುದಿಲ್ಲ. ಈ ವಿಚಾರದಲ್ಲಿ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆ ಇದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S. Yediyurappa) ಹೇಳಿದ್ದಾರೆ.

ನಗರದ ಕೆಎಲ್‍ಇ ಗೆಸ್ಟ್ ಹೌಸ್‍ನಲ್ಲಿ `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದ್ದಾರೆ. ಈ ವೇಳೆ, ಬಿಜೆಪಿ (BJP) ಹೈಕಮಾಂಡ್‍ಗೆ ಬ್ಲಾಕ್‍ಮೇಲ್ ಮಾಡಿ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ ಎಂಬ ಯತ್ನಾಳ್ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯತ್ನಾಳ್ ಆರೋಪಗಳ ಬಗ್ಗೆ ನಾನು ಹೆಚ್ಚಿನ ಟೀಕೆ ಮಾಡುವುದಿಲ್ಲ. ಮುಂದೆ ಎಲ್ಲಾ ಸರಿಯಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ

ಮುಂದುವರಿದು ಮಾತನಾಡಿದ ಅವರು, ಇಂದು 25 ಸಾವಿರ ಜನ ಸೇರಿ ಸರ್ಕಾರದ ವೈಫಲ್ಯ ಹಾಗೂ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಎಂದು ಒಂದು ಕಿಲೋಮೀಟರ್ ರಸ್ತೆ ಸಹ ಆಗುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಬಹಳಷ್ಟು ಜನ ನಮಗೆ ಬೆಂಬಲ ನೀಡುತ್ತಿರುವುದನ್ನು ಗಮನಿಸಿದರೆ ಸರ್ಕಾರದ ಮೇಲೆ ಜನ ಎಷ್ಟು ಬೇಸತ್ತಿದ್ದಾರೆ ಎಂದು ತಿಳಿಯುತ್ತದೆ ಎಂದಿದ್ದಾರೆ.

ಒಂದು ಸರ್ಕಾರ ಆಡಳಿತಕ್ಕೆ ಬಂದಾಗ ಆರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಇಷ್ಟು ದಿನ ಸುಮ್ಮನಿದ್ದೆವು. ಈಗ ಸಮಯ ಮುಗಿದಿದ್ದು, ಹೀಗಾಗಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಆಕಾಂಕ್ಷಿಯೂ ಅಲ್ಲದೆ ಕೊನೇ ಸಾಲಿನಲ್ಲಿದ್ದ ಭಜನ್ ಲಾಲ್ ಸಿಎಂ ಆಗಿದ್ದು ಹೇಗೆ?