ಈ ಬಾರಿ ಬಿಜೆಪಿಯ ಟಿಕೆಟ್ ಹೇಗೆ ಹಂಚಿಕೆ ಮಾಡಲಾಗುತ್ತೆ: ಬಿಎಸ್‍ವೈ ಹೇಳ್ತಾರೆ ಓದಿ

ಬಳ್ಳಾರಿ: ಟಿಕೆಟ್ ಹಂಚಿಕೆ ಬಗ್ಗೆ ಈಗ ಏನೂ ಚರ್ಚೆ ಮಾಡಲ್ಲ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಘಟಕದಿಂದಲೂ ಸಮೀಕ್ಷೆ ಮಾಡಿ ಜನರ ಅಭಿಪ್ರಾಯ ಪಡೆದು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಪಕ್ಷದ ಸಭೆ ನಡೆಸಲು ಮುನ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆದ ನಂತರ 1,28,361 ಕೋಟಿ ಸಾಲ ಮಾಡಿದ್ದಾರೆ. ಇದೂ ಸಿಎಂ ಸಾಧನೆಯಾಗಿದೆ. ಸಾಲ ಮಾಡಿದ್ರೂ ರಾಜ್ಯದಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಸಿಎಂ ತುಗಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರಿಗೆ ವಂಚನೆ, ದ್ರೋಹ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸಿಮರು. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ರಾಜ್ಯ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿದೆ ಎಂದು ಬಿಎಸ್ ಯಡಿಯೂರಪ್ಪ ಕಿಡಿಕಾರಿದರು.

ರಾಜ್ಯದ ಸಂಸದರು ವಿಧಾನಸಭೆ ಸ್ಪರ್ಧಿಸಬೇಕು ಅನ್ನೋ ಆಶಯ ಇದೆ. ಆದ್ರೆ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಟಿಕೆಟ್ ಹಂಚಿಕೆ ಬಗ್ಗೆ ಈಗ ಎನೂ ಚರ್ಚೆ ಮಾಡಲ್ಲ, ಅಮೀತ್ ಷಾ ಮತ್ತು ರಾಜ್ಯ ಘಟಕದಿಂದಲೂ ಸಮೀಕ್ಷೆ ಮಾಡಿ ಜನರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಉಡುಪಿಯ ಇಫ್ತಾರ್ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ, ನೋ ಕಮೆಂಟ್ ಅಂತಾ ಹೇಳಿದರು.

ಮೈಸೂರಿನಲ್ಲಿ ಗೋ ಮಾಂಸ ಭಕ್ಷಣೆ ಮಾಡಿ ಒಂದು ರೀತಿ ಎಲ್ಲರಿಗೂ ಅಪಮಾನ ಮಾಡುವಂತಹ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಅವರು ಮನೆಯಲ್ಲಿ ಏನು ಬೇಕಾದರೂ ಸೇವಿಸಲಿ, ಆದ್ರೆ ಸಾರ್ವಜನಿಕವಾಗಿ, ಸರ್ಕಾರಿ ಕಟ್ಟಡದಲ್ಲಿ ಸೇವಿಸೋದು ಸರಿಯಲ್ಲ. ಇದರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದ್ರೆ ರಾಜ್ಯದ ಜನತೆ ಸರ್ಕಾರವನ್ನ ಕ್ಷಮಿಸೋದಿಲ್ಲ ಎಂದು ಬಿಎಸ್‍ವೈ ಹೇಳಿದರು.

 

Comments

Leave a Reply

Your email address will not be published. Required fields are marked *