ದೇವರಿಚ್ಚೆ ಇದ್ರೆ ದೇವೇಗೌಡ ಮನೆಗೆ ಹೋಗ್ತಾರೆ- ಬಿಎಸ್‍ವೈ ಭವಿಷ್ಯ

ಉಡುಪಿ: ಚುನಾವಣೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ. ಕೋಲಾರ ಜಿಲ್ಲೆಯನ್ನು ನಾವು ಗೆಲ್ಲುತ್ತೇವೆ. ದೇವರ ದಯೆ ಇದ್ರೆ ಮಾಜಿ ಪ್ರಧಾನಿ ದೇವೇಗೌಡರು ಮನೆಗೆ ಹೋಗ್ತಾರೆ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನ ವಂಡ್ಸೆಯಲ್ಲಿ ಶಿವಮೊಗ್ಗ ಬಿ.ಜೆ.ಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪರ ಪ್ರಚಾರ ನಡೆಸಿ ಮಾತನಾಡುತ್ತಿದ್ದರು. ಬಿಜೆಪಿ ದೇಶದಲ್ಲಿ 300 ಸೀಟು, ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿತ್ತು. ಆದ್ರೆ ಪ್ರಧಾನಿ ಮೋದಿ ದೇಶವನ್ನು ಸದೃಢವನ್ನಾಗಿ ಮಾಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಬಚ್ಚಾ. ರಾಹುಲ್ ಹುಡುಗಾಟಿಕೆ ಮಾತು ಆಡುತ್ತಾನೆ ಎಂದು ಗುಡುಗಿದ್ರು.

ಮಂಡ್ಯದಲ್ಲಿ ಸುಮಲತಾಗೆ ಅವಮಾನ ಮಾಡುತ್ತಿದ್ದಾರೆ. ಆದ್ರೆ ನಾವು ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಸಿ.ಎಂ ಕುಮಾರಸ್ವಾಮಿ ಕರಾವಳಿ ಜನರಿಗೆ ಬುದ್ಧಿಯಿಲ್ಲ ಎಂದು ಹೇಳಿದ್ದರು. ರಾಹುಲ್ ಗಾಂಧಿಯ ಕೃಪೆಯಿಂದ ಸಿಎಂ ಆದೆ ಅಂತಾರೆ,ಪುಲ್ವಾಮಾ ಘಟನೆ ಗೊತ್ತಿತ್ತು ಎಂದು ಹೇಳ್ತಾರೆ. ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿರಬೇಕು ಅದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ರು.

ಕುಮಾರಸ್ವಾಮಿ ಲಜ್ಜೆಗೆಟ್ಟ ಬೇಜವಾಬ್ದಾರಿ ಸಿಎಂ. ಇವರ ಹೇಳಿಕೆಯಿಂದ ಕರ್ನಾಟಕ ತಲೆತಗ್ಗಿಸುವಂತಾಗಿದೆ. ಇಂತಹ ತುಘಲಕ್ ದರ್ಬಾರ್ ಸಿಎಂ ನಮಗೆ ಬೇಡ ಎಂದರು.

Comments

Leave a Reply

Your email address will not be published. Required fields are marked *