ಬಿಎಸ್‍ವೈ ಎಲ್ಲಿಂದ ಸ್ಪರ್ಧಿಸಿದರೂ ಕಾಂಗ್ರೆಸ್‍ಗೆ ಏನು ವ್ಯತ್ಯಾಸವಾಗಲ್ಲ: ತನ್ವೀರ್ ಸೇಠ್

ರಾಯಚೂರು: ಮುಂಬರುವ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಿಂದ ಸ್ಪರ್ಧಿಸಿದರೂ ಕಾಂಗ್ರೆಸ್ ಪಕ್ಷಕ್ಕೆ ಏನು ವ್ಯತ್ಯಾಸವಾಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನ ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಡಿಎಆರ್ ಕವಾಯತ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಪರೇಡ್ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಯಾರೇ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿದರು ನಮಗೆ ಭಯವಿಲ್ಲ ಎಂದು ಹೇಳಿದರು.

5 ಸಾವಿರ ಶಾಲೆಗಳು ಆರ್‍ಟಿಇ ಅನುದಾನದಿಂದಲೇ ನಡೆಯುತ್ತಿವೆ. ಆರ್‍ಟಿಇನಲ್ಲಿ ಕೂಡಲೇ ತಿದ್ದುಪಡಿ ತರಬೇಕಿದೆ. ಹೈ.ಕ. ಭಾಗದಲ್ಲಿ ಕಲಬುರಗಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಜನರಿಗೆ ಎಲ್ಲಿ ಸೌಲಭ್ಯಗಳ ಅವಶ್ಯಕತೆಯಿದೆ ಅಲ್ಲಿ ಸೌಲಭ್ಯ ಕೊಡಬೇಕು. ಏಮ್ಸ್ ವಿಚಾರದಲ್ಲಿ ರಾಯಚೂರು ಜಿಲ್ಲೆಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *