ಉಡುಪಿ: ಬುಧವಾರವಷ್ಟೇ ಅಯ್ಯಪ್ಪ ಮಾಲೆ ಹಾಕಿದ್ದ ಕಾರ್ಮಿಕರೊಬ್ಬರು ಬಾವಿ ಕುಸಿದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನಲ್ಲಿ ನಡೆದಿದೆ.
ಗೋಪಾಲ ಮೊಗವೀರ (32) ಮೃತ ದುರ್ದೈವಿ ಕಾರ್ಮಿಕರಾಗಿದ್ದಾರೆ. ಇವರು ನಿನ್ನೆಯಷ್ಟೆ ಅಯ್ಯಪ್ಪ ಮಾಲೆ ಧರಿಸಿದ್ದರು. ಬಾವಿಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಾವಿ ಕುಸಿದಿದ್ದರಿಂದ ಕಲ್ಲು ಮಣ್ಣಿನಡಿ ಗೋಪಾಲ ಸಿಲುಕಿದ್ದು, ಮಣ್ಣಿನ ಅವಶೇಷಗಳಡಿ ಶವ ದೊರೆತಿದೆ.

2 ಹಿಟಾಚಿ, 2 ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಬಾವಿ ಮಣ್ಣು ಇನ್ನಷ್ಟು ಕುಸಿದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ ಸತತ ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಗೋಪಾಲ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಯಿತು.
ಘಟನೆಯಲ್ಲಿ ರಕ್ಷಣೆಗೊಳಪಟ್ಟ ಮೂವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply