ಎಸಿಬಿ ಬಲೆಗೆ ಬಿದ್ದ ಆಯುಷ್ ಅಧಿಕಾರಿ ಜೈಲಿಗೆ

ಧಾರವಾಡ: ಆರ್‌ ಎಂ ಪಿ ವೈದ್ಯನಿಂದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಆಯುಷ್ ಅಧಿಕಾರಿ ಜೈಲು ಪಾಲಾಗಿದ್ದಾರೆ.

ಆರ್‍ಜಿ ಮೇತ್ರಿ ಎಸಿಬಿ ಬಲೆಗೆ ಬಿದ್ದವರು. ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಆರ್‍ಎಂಪಿ ವೈದ್ಯ ಹರಿಶ್ಚಂದ್ರ ನಾರಾಯಣಪುರಗೆ ಈ ಆಯುಷ್ ಅಧಿಕಾರಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ

BRIBE

ಆಸ್ಪತ್ರೆ ನಡೆಸಲು ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ಹೇಳಿದ್ದ ವೈದ್ಯ ಅಧಿಕಾರಿ ಮೇತ್ರಿ, ಮುಂಗಡವಾಗಿ 10 ಸಾವಿರ ರೂ. ಪಡೆದಿದ್ದರು. ಧಾರವಾಡದಲ್ಲಿ 10 ಸಾವಿರ ಪಡೆಯುವಾಗ ಎಸಿಬಿ ದಾಳಿ ಮಾಡಿತ್ತು. ಸದ್ಯ ಎಸಿಬಿ ಅಧಿಕಾರಿಗಳು ಆಯುಷ್ ಅಧಿಕಾರಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅವನಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

Comments

Leave a Reply

Your email address will not be published. Required fields are marked *