ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

ಬೆಂಗಳೂರು: ದೇಶದೆಲ್ಲೆಡೆ ಇಂದು (ಅ.1) ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರು ಖರೀದಿಗಾಗಿ ಮುಗಿಬಿದ್ದಿದ್ದು, ಕೆ.ಆರ್ ಮಾರ್ಕೆಟ್  (KR Market) ಸುತ್ತ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಆಗಿದೆ.

ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೂವು, ಹಣ್ಣು ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆ ಟೌನ್‌ಹಾಲ್‌ನಿಂದ ಕೆಆರ್ ಮಾರ್ಕೆಟ್‌ವರೆಗೆ ಟ್ರಾಫಿಕ್ ಬಿಸಿ ತಟ್ಟಿದೆ. ಖರೀದಿಗೆ ಬಂದ ಜನರು ಫ್ಲೈಓವರ್ ಮೇಲೆಯೂ ವಾಹನಗಳನ್ನು ಪಾರ್ಕ್ ಮಾಡಿದ್ದು, ಫ್ಲೈ ಓವರ್ ಮೇಲೆಯೂ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.ಇದನ್ನೂ ಓದಿ: ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್‌ – ಹರಿಹರ ಕೋಟೆ ಹತ್ತಲು ಡಬಲ್‌ ಗುಂಡಿಗೆ ಬೇಕು!

ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಬೆಲೆ ಏರಿಕೆಯಾದರೂ ಹಬ್ಬರ ಸಂಭ್ರಮ ಜೋರಾಗಿ ಇದೆ.

ಹೂವು                         ಇಂದಿನ ದರ (ಕೆ.ಜಿಗೆ)
ಸೇವಂತಿ                      200-300 ರೂ.
ಕನಕಾಂಬರ                2000-2500 ರೂ.
ಮಲ್ಲಿಗೆ                         1500-2000 ರೂ.
ಗುಲಾಬಿ                         400-450 ರೂ.
ಕಾಕಡ                              800 ರೂ
ಬಾಳೆಕಂಬ ಜೋಡಿ             50-70ರೂ.
ಕುಂಬಳಕಾಯಿ                  50-60ರೂ
ಗುಲಾಬಿ ಹಾರ                   4000 ರೂ.