ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್

ಬೆಂಗಳೂರು: ಯಶ್ ಜನ್ಮದಿನಕ್ಕೆ ಅವರ ಮಕ್ಕಳಾದ ಐರಾ, ಯಥರ್ವ್ ಗಿಫ್ಟ್ ನೀಡಿದ್ದಾರೆ. ಈ ಫೋಟೋವನ್ನು ನಟಿ ರಾಧಿಕಾ ಪಂಡಿತ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪುತ್ರಿ ಐರಾ ಮತ್ತು ಪುತ್ರ ಯಥರ್ವ್ ಒಂದು ವಿಶೇಷ ಗಿಫ್ಟ್ ನೀಡಿದ್ದಾರೆ. ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥರ್ವ್ ಅಂಗೈ ಮುದ್ರೆ ಒತ್ತಿದ್ದಾರೆ. ಹ್ಯಾಪಿ ಬರ್ತ್‍ಡೆ ಡಡ್ಡಾ ಎಂದು ಬರೆಯಲಾಗಿದೆ. ಈ ಮುದ್ದಾದ ಉಡುಗೊರೆಯ ಫೋಟೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಈಗ ವೈರಲ್ ಆಗುತ್ತಿದೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರತಂಡ ವಿಭಿನ್ನ ಮತ್ತು ವಿಶೇಷವಾಗಿ ವಿಶ್ ಮಾಡುತ್ತದೆ ಎಂದು ಕಾದು ಕುಳಿತಿದ್ದ, ಅಭಿಮಾನಿಗಳಿಗೆ ನಿರಾಸೆಯಾಗಿಲ್ಲ. ಚಿತ್ರತಂಡ ಯಶ್ ಅವರ ಖಡಕ್ ಲುಕ್ ಇರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ. ಎಚ್ಚರಿಕೆ, ಮುಂದೆ ಅಪಾಯವಿದೆ. ನಮ್ಮ ರಾಕಿ ಭಾಯಿ ಯಶ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದು ಯಶ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಲುಕ್‍ನ ಪೋಟೋವನ್ನು ಕೆಜಿಎಫ್ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್

ಓಮಿಕ್ರಾನ್, ಕೊರೊನಾ ಸೋಂಕಿನ ಭೀತಿ ಎಲ್ಲೆಡೆ ಇರುವುದರಿಂದ ಯಶ್ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಯಶ್ ಜನ್ಮದಿನವಾದ ಇಂದು ಕರ್ನಾಟಕದಲ್ಲಿ ವಾರಾಂತ್ಯದ ಕಫ್ರ್ಯೂ ಇದೆ. ಈ ಕಾರಣಕ್ಕೆ ಯಶ್ ಮನೆ ಸಮೀಪ ತೆರಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಶುಭಕೋರುತ್ತಿದ್ದಾರೆ. ಕೇವಲ ಕರ್ನಾಟಕದ ಫ್ಯಾನ್ಸ್ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಯಶ್ ಹೆಸರು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *