ಅಯೋಧ್ಯೆ ರಾಮ ಮಂದಿರ ಕಾಮಗಾರಿ ವೀಕ್ಷಣೆಗೆ ಅವಕಾಶ

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯಾಗಿ ವರ್ಷ ತುಂಬಿದೆ. ಶ್ರೀ ರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ಈವರೆಗೆ ಭಕ್ತರಿಗೆ ನೋಡುವ ಅವಕಾಶ ಇರಲಿಲ್ಲ. ಇದೀಗ ಕನಸಿನ ಮಂದಿರ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ.

ರಾಮ ಲಲ್ಲಾನ ದರ್ಶನ ಪಡೆಯುವ ಭಕ್ತರಿಗೆ ಜನ್ಮಭೂಮಿಯಲ್ಲಿ ನಡೆಯುವ ಚಟುವಟಿಕೆ ವೀಕ್ಷಣೆಗೆ ಅವಕಾಶವಿರಲಿಲ್ಲ. ಲಕ್ಷಾಂತರ ಭಕ್ತರ ಬೇಡಿಕೆ ಮತ್ತು ಆಸೆಯನ್ನು ಮನ್ನಿಸಿ ಟ್ರಸ್ಟ್ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಅವಕಾಶ ಕಲ್ಪಿಸುವ ನಿರ್ಧಾರ ತೆಗೆದುಕೊಂಡಿದೆ. ರಾಮ ಜನ್ಮಭೂಮಿಗೆ ಭೇಟಿ ನೀಡುವವರು, ಸ್ಥಳದಲ್ಲಿ ನಡೆಯುತ್ತಿರುವ ಮಂದಿರ ನಿರ್ಮಾಣ ಕಾಮಗಾರಿ ನೋಡಲು ಸಾಧ್ಯವಾಗಿದೆ.

ರಾಮ್ ಜರೋಖಾದಿಂದ ಕಾಮಗಾರಿ ನೋಡಲು ಅನುಕೂಲವಾಗುವಂತೆ ಭಕ್ತರಿಗಾಗಿ ಕಿಟಕಿ ತೆರೆಯಲಾಗಿದೆ. ದರ್ಶನ ಮಾರ್ಗದಲ್ಲಿ ಮಾನಸ್ ಭವನದ ಬಳಿ ನಿರ್ಮಿಸಲಾದ ಪಶ್ಚಿಮ ಗೋಡೆಯ ಮಧ್ಯದಲ್ಲಿ ಗ್ಯಾಲರಿ ಮಾಡಲಾಗಿದೆ. ಜನ ಸರತಿ ಸಾಲಿನಲ್ಲಿ ನಿಂತು ಮಂದಿರ ಕಾಮಗಾರಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಫೋಟೋ ಕ್ಲಿಕ್ಕಿಸುವ ಅವಕಾಶವನ್ನು ಸದ್ಯ ಮಾಡಿಕೊಡಲಾಗಿಲ್ಲ. ಇದಕ್ಕೂ ಬೇಡಿಕೆ ಬರಲು ಶುರುವಾಗಿದೆ. ನೆನಪಿಗಾಗಿ ಫೋಟೋ ಕ್ಲಿಕ್ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಆಡಳಿತ ಮಂಡಳಿಯಲ್ಲಿ ಜನ ಕೇಳಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್‍ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ

ಈ ರಾಮ್ ಜರೋಖಾದ ವ್ಯವಸ್ಥೆಗೆ ಟ್ರಸ್ಟ್ ರಾಮ ಕಿಂಡಿ ಎಂದು ಹೆಸರಿಸಲಾಗಿದೆ. ಕಿಂಡಿಯನ್ನು 6 ಅಡಿ ಎತ್ತರ 8 ಅಡಿ ಉದ್ದದಲ್ಲಿ ಮಾತ್ರ ತೆರೆಯಲಾಗಿದೆ. ಮುಂದೆ ಸುಮಾರು 20 ಅಡಿ ಉದ್ದದಲ್ಲಿ ಕಿಂಡಿಯನ್ನು ತೆರೆಯಲಾಗುತ್ತದೆ. ಕಬ್ಬಿಣದ ಜಾಲರಿಯನ್ನು ಅಳವಡಿಸಲಾಗಿದೆ. ಇದನ್ನೂ ಓದಿ:ಆ ಪುಸ್ತಕ ಓದಿ ನಾನು ಮಾಂಸಾಹಾರ ತಿನ್ನೋದು ಬಿಟ್ಟೆ: ಸಿಎಂ ಬೊಮ್ಮಾಯಿ

Comments

Leave a Reply

Your email address will not be published. Required fields are marked *