ಅಯೋಧ್ಯ ಏರ್‌ಪೋರ್ಟ್‌ ಡಿ.15ಕ್ಕೆ ಸಿದ್ಧ – ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂದು ಹೆಸರು

ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ಉದ್ಘಾಟನೆಗೆ ಒಂದು ತಿಂಗಳ ಮುಂಚೆಯೇ ಮೊದಲ ಹಂತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿಸೆಂಬರ್ 15 ರೊಳಗೆ ಸಿದ್ಧಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಿಳಿಸಿದ್ದಾರೆ.

ವಿಮಾನ ನಿಲ್ದಾಣವನ್ನು (Ayodhya Airport) ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂದು ಕರೆಯಲಾಗುವುದು. ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ವಿಮಾನಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಕುಡಿಯುವ ನೀರಿಗಾಗಿ ಆಂಧ್ರ-ತೆಲಂಗಾಣ ಕಿತ್ತಾಟ; ಅಣೆಕಟ್ಟು ಗೇಟ್‌ ತೆರೆದು ನೀರು ಬಿಟ್ಟ 700 ಆಂಧ್ರ ಪೊಲೀಸರು

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿಕೆ ಸಿಂಗ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಪ್ರಧಾನಿ ಮೋದಿಯವರ ದೂರದೃಷ್ಟಿಯೊಂದಿಗೆ ಅಯೋಧ್ಯೆಯು ‘ನವ ಭಾರತದ ದ್ಯೋತಕ’ವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಆರಂಭದಲ್ಲಿ ಅಯೋಧ್ಯೆಯು 178 ಎಕರೆಗಳಷ್ಟು ವಿಶಾಲವಾದ ವಿಮಾನ ನಿಲ್ದಾಣವನ್ನು ಹೊಂದಿತ್ತು. ಆದರೆ ಈಗ ಅದನ್ನು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನ 50 ಸಿಬ್ಬಂದಿಯ ಬಯೋಮೆಟ್ರಿಕ್ ಮಿಸ್ ಮ್ಯಾಚ್ – ಪರೀಕ್ಷಾ ಅಕ್ರಮದ ಶಂಕೆ

ಈ ಯೋಜನೆಗೆ ರಾಜ್ಯ ಸರ್ಕಾರ 821 ಎಕರೆ ಭೂಮಿ ನೀಡಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉಸ್ತುವಾರಿಯಲ್ಲಿ ಶಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದು ಅಯೋಧ್ಯೆಯ ಅಭಿವೃದ್ಧಿ ಮತ್ತು ನಗರದ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಸರ್ಕಾರದ ಬದ್ಧತೆಯ ಭಾಗವಾಗಿದೆ ಎಂದಿದ್ದಾರೆ.

ಎರಡನೇ ಹಂತದಲ್ಲಿ ರನ್‌ವೇಯ ಉದ್ದವನ್ನು 3,700 ಮೀಟರ್‌ಗೆ ವಿಸ್ತರಿಸಲಾಗುವುದು. ಬೋಯಿಂಗ್ 787 ಡ್ರೀಮ್‌ಲೈನರ್ ಮತ್ತು ಬೋಯಿಂಗ್ 777 ನಂತಹ ವಿಶಾಲವಾದ ವಿಮಾನಗಳು ನೇರವಾಗಿ ಅಯೋಧ್ಯೆಯಲ್ಲಿ ಇಳಿಯಲು ಅನುವು ಮಾಡಿಕೊಡುತ್ತದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಯುವತಿಯ ಹತ್ಯೆಗೈದು ಆಕೆಯ ವಾಟ್ಸಪ್ ಸ್ಟೇಟಸ್‍ಗೆ ಮೃತದೇಹದ ಫೋಟೋ ಹಾಕಿದ ಪಾಗಲ್ ಪ್ರೇಮಿ