ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ 2 ದಿನಗಳಿಂದ ಆಟೋಗಳು ಸಾಲುಸಾಲಾಗಿ ನಿಂತಿವೆ. ದರ್ಶನ್ ಅವರನ್ನು ಭೇಟಿ ಮಾಡಲು ಚಾಲಕರು ತಮ್ಮ ಆಟೋ ಸಮೇತ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

ದರ್ಶನ್ ಅವರ ಅಭಿಮಾನಿಗಳು ಈಗ ಹೊಸ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ಹೊಸ ಆಲೋಚನೆಯೊಂದಿಗೆ ಅಭಿಮಾನಿಗಳು ತಮ್ಮ ಆಟೋ ಸಮೇತ ದರ್ಶನ್ ಅವರ ಮನೆಮುಂದೆ ಹೋಗಿದ್ದಾರೆ.

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆಟೋಗ್ರಾಫ್ ಅನ್ನು ಕೈ ಮೇಲೆ ಅಥವಾ ಪುಸ್ತಕದಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ಆಟೋ ಚಾಲಕರು ತಮ್ಮ ನೆಚ್ಚಿನ ನಟನ ನೆನಪು ಶಾಶ್ವತವಾಗಿ ಉಳಿಯಲಿ ಎಂದು ತಮ್ಮ ಆಟೋ ಮೇಲೆ ದರ್ಶನ್ ಅವರ ಆಟೋಗ್ರಾಫ್ ಅನ್ನು ಪಡೆದಿದ್ದಾರೆ.

ದರ್ಶನ್ ಅವರ ಆಟೋಗ್ರಾಫ್ ಸದಾ ನೆನಪಿನಲ್ಲಿ ಇರಬೇಕೆಂದು ಅವರ ಅಭಿಮಾನಿಗಳು ತಮ್ಮ ಪ್ರತಿನಿತ್ಯ ದುಡಿಮೆಗೆ ಆಧಾರವಾಗಿರುವ ಆಟೋಗಳ ಮೇಲೆಯೇ ಹಾಕಿಸಿಕೊಳ್ಳುತ್ತಿದ್ದಾರೆ. ಸದ್ಯ ಆಟೋಗಳ ಮೇಲೆ ದರ್ಶನ್ ಹಾಕಿರುವ ಆಟೋಗ್ರಾಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ಒಬ್ಬ ಅಭಿಮಾನಿ ವಾಹನದಲ್ಲಿ ಬಂದು ದರ್ಶನ್ ಇರೋದು ನೋಡಿ ವಾಹನ ನಿಲ್ಲಿಸಿ ಮಾತನಾಡಿಸಿದ್ದರು. ಆಗ ಅಭಿಮಾನಿ ಪೆನ್ನು ಪೇಪರ್ ಹಿಡಿದು ದರ್ಶನ್‍ಗೆ ಆಟೋಗ್ರಾಫ್ ಕೇಳಿದ್ದರು. ಯಜಮಾನ ಚಿತ್ರದ ಶೂಟಿಂಗ್‍ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳ ತಾಳ್ಮೆಯಿಂದ ಹಸ್ತಾಕ್ಷರ ಬರೆದುಕೊಟ್ಟರು. ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ಆಟೋಗ್ರಾಫ್‍ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಪ್ರೀತಿಪೂರ್ವಕ ಮಾತು, ಜೀವನಕ್ಕೆ ಶುಭ ಕೋರುತ್ತಾರೆ. ಆದರೆ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.

 

Comments

Leave a Reply

Your email address will not be published. Required fields are marked *