ಆಟೋ ಚಾಲಕರು ತಪ್ಪದೇ ಓದ್ಲೇಬೇಕಾದ ಸುದ್ದಿ- ಇನ್ಮುಂದೆ ಡಿಎಲ್ ಇದ್ರೆ ಆಟೋ ಓಡಿಸೋಕೆ ಆಗಲ್ಲ!

ಬೆಂಗಳೂರು: ಆಟೋ ಚಾಲಕರು ತಪ್ಪದೇ ನೋಡಲೇಬೇಕಾದ ಸುದ್ದಿ. ಸಿಲಿಖಾನ್ ಸಿಟಿ ಸೇರಿದಂತೆ ರಾಜ್ಯದೆಲ್ಲೆಡೆ ಆಟೋಗಳ ಚಾಲಕರು ತಮ್ಮ ಡಿಎಲ್‍ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕು. ಇದು ಕಡ್ಡಾಯವಾಗಿದ್ದು, ಇಂಥದ್ದೊಂದು ನಿಯಮವನ್ನು ಶೀಘ್ರವೇ ಸಾರಿಗೆ ಇಲಾಖೆ ಜಾರಿಗೆ ತರಲಿದೆ.

ಅದಕ್ಕಾಗಿ ಹೊಸ ಸಾಫ್ಟ್ ವೇರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷದ ಜನವರಿಯ ಅಂತ್ಯದ ಒಳಗೆ ಎಲ್ಲಾ ಆಟೋ ಚಾಲಕರು ಆಧಾರ್ ಕಾರ್ಡ್‍ನ್ನು ತಮ್ಮ ಡಿಎಲ್‍ಗೆ ಲಿಂಕ್ ಮಾಡಿಸಲೇಬೇಕು. ಲಿಂಕ್ ಮಾಡಿಸದೇ ಇದ್ದರೆ ಅವರ ಲೈಸನ್ಸ್ ಅನ್ನು ರದ್ದುಗೊಳಿಸಲಾಗುತ್ತದೆ ಎಂದು ಸಾರಿಗೆ ಆಯುಕ್ತ ದಯಾನಂದ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಂದೇ ಪರವಾನಗಿ ಪಡೆದು ಹಲವು ಆಟೋಗಳನ್ನು ಓಡಿಸುತ್ತಿರೋದು ಆರ್ ಟಿಒ ಇಲಾಖೆಗೆ ಮಾಹಿತಿ ಬಂದಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ಥುತ ಬೆಂಗಳೂರಿನಲ್ಲಿ ಸದ್ಯ 1 ಲಕ್ಷ 25 ಸಾವಿರ ಆಟೋಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಅನಧಿಕೃತವಾಗಿ 50 ಸಾವಿರಕ್ಕೂ ಹೆಚ್ಚಿನ ಆಟೋಗಳು ಬೆಂಗಳೂರಲ್ಲಿ ಓಡಾಡುತ್ತಿವೆ ಎಂಬ ಮಾಹಿತಿ ಇದೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದ ಅನಧಿಕೃತ ಆಟೋಗಳಿಗೆ ಕಡಿವಾಣ ಬೀಳೋದು ಗ್ಯಾರಂಟಿ ಅನ್ನೋದು ಆರ್ ಟಿಒ ಅಧಿಕಾರಿಗಳ ಮಾತಾಗಿದೆ.

 

Comments

Leave a Reply

Your email address will not be published. Required fields are marked *