ಕೊಪ್ಪಳ: ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು, ಮರಳಿ ಕೊಡದೆ ಯಾಮಾರಿಸೋರೆ ಇರುತ್ತಾರೆ. ಆದರೆ ಕೊಪ್ಪಳದಲ್ಲಿ ಆಟೋ ಚಾಲಕರು ಪ್ರಯಾಣಿಕರು ಬಿಟ್ಟು ಹೋದ ಬೆಲೆಬಾಳುವ ವಸ್ತುಗಳನ್ನು ಮರಳಿ ಗ್ರಾಹಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಬಳ್ಳಾರಿಯಿಂದ ಬಂದ ಜಯಶ್ರೀ ಕುಟುಂಬಸ್ಥರು ಆಟೋದಲ್ಲಿ ಮನೆಗೆ ತೆರಳಿದ್ದರು. ಅವರು ಆಟೋದಲ್ಲಿಯೇ ಮರೆತು ತಮ್ಮ ಪರ್ಸ್ ಬಿಟ್ಟು ಹೋಗಿದ್ದರು. ಪರ್ಸ್ ನಲ್ಲಿ ಮೂರು ಬೆಲೆಬಾಳು ಮೊಬೈಲ್‍ಗಳು, ಹಣ, ಬಂಗಾರದ ಆಭರಣಗಳಿದ್ದವು. ಸುಮಾರು 2 ಗಂಟೆ ಬಳಿಕ ಮೊಬೈಲ್‍ಗಳ ನೆನಪಾದಾಗ ಪರ್ಸ್ ಬಿಟ್ಟಿರುವುದು ಬೆಳಕಿಗೆ ಬಂದಿದೆ.

ಜಯಶ್ರೀ ಆಟೋ ಏರಿದ ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ರೈಲ್ವೆ ನಿಲ್ದಾಣದ ಚಾಲಕರು ಅವರಿಗೆ ಧೈರ್ಯ ತುಂಬಿ ಕೇವಲ ಹತ್ತು ನಿಮಿಷದಲ್ಲೇ ಯಾರ ಆಟೋ ಎಂದು ಗುರುತಿಸಿ ಆಟೋದಲ್ಲೇ ಇದ್ದ ಪರ್ಸ್ ಮರಳಿ ನೀಡಿದ್ದಾರೆ. ಪರ್ಸ್ ನಲ್ಲಿದ್ದ ಎಲ್ಲಾ ವಸ್ತುಗಳು ಹಾಗೆ ಇದ್ದವು. ಕಳೆದು ಹೋಗಿದ್ದ ವಸ್ತುಗಳು ತಮ್ಮ ಕೈ ಸೇರಿದ್ದಕ್ಕೆ ಆಟೋದವರಿಗೆ ಜಯಶ್ರೀ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಮೂಲಕ ಕೊಪ್ಪಳ ರೈಲ್ವೆ ನಿಲ್ದಾಣದ ಆಟೋ ಚಾಲಕರು ಮಾದರಿಯಾಗಿ ಮಾನವೀಯತೆ ಮೆರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply