ಹಿಂದಿ ಮಾತಾಡ್ತೀನಿ ಎಂದ ಆಟೋ ಚಾಲಕನಿಗೆ ಉದ್ಧವ್‌, ರಾಜ್‌ ಠಾಕ್ರೆ ಬಣದಿಂದ ಥಳಿತ

– ಮರಾಠಿ & ಮಹಾರಾಷ್ಟ್ರಕ್ಕೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸ್ತೀವಿ ಅಂತ ಎಚ್ಚರಿಕೆ

ಮುಂಬೈ: ಹಿಂದಿ (Hindi) ಮಾತನಾಡುತ್ತೇನೆ ಎಂದ ಆಟೋ ಚಾಲಕನಿಗೆ ಉದ್ಧವ್‌ ಠಾಕ್ರೆ ನೇತೃತ್ವದ ಶೀವಸೇನೆ ಮತ್ತು ರಾಜ್‌ ಠಾಕ್ರೆಯ ಎಂಎನ್‌ಎಸ್‌ ಕಾರ್ಯಕರ್ತರು ಥಳಿಸಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ವಲಸೆ ಬಂದ ಆಟೋರಿಕ್ಷಾ ಚಾಲಕನ ಮೇಲೆ ಭಾಷೆ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

ಮರಾಠಿಯಲ್ಲಿ (Marathi) ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ ರಿಕ್ಷಾ ಚಾಲಕ, ‘ನಾನು ಹಿಂದಿಯಲ್ಲಿ ಮಾತನಾಡುತ್ತೇನೆ’ ಎಂದು ಪದೇ ಪದೇ ಹೇಳಿರುವುದು ವೀಡಿಯೊದಲ್ಲಿದೆ. ಸಾರ್ವಜನಿಕವಾಗಿ ಮರಾಠಿ ಬಳಸದಿರುವ ಬಗ್ಗೆ ಚಾಲಕನನ್ನು ಪ್ರಶ್ನಿಸಿದ್ದರು. ಚಾಲಕ ಹಿಂದಿ ಮತ್ತು ಭೋಜ್‌ಪುರಿಯಲ್ಲಿ ಮಾತನಾಡಲು ಇಷ್ಟಪಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದ.

ವಿರಾರ್ ರೈಲ್ವೆ ನಿಲ್ದಾಣದ ಬಳಿ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ ಬೆಂಬಲಿಗರ ಗುಂಪೊಂದು ರಿಕ್ಷಾ ಚಾಲಕನನ್ನು ಥಳಿಸಿದೆ. ಗುಂಪುಗಳ ಮಹಿಳಾ ಸದಸ್ಯರು, ಚಾಲಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್‌, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

‘ಯಾರಾದರೂ ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮರಾಠಿ ಜನರನ್ನು ಅವಮಾನಿಸಲು ಧೈರ್ಯ ಮಾಡಿದರೆ, ಅವರಿಗೆ ನಿಜವಾದ ಶಿವಸೇನಾ ಶೈಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಸುಮ್ಮನಿರುವುದಿಲ್ಲ’ ಎಂದು ಶಿವಸೇನೆ ಉದ್ಧವ್‌ ಬಣದ ಉದಯ್‌ ಜಾಧವ್ ಎಚ್ಚರಿಸಿದ್ದಾರೆ.

ಆ ಚಾಲಕ ಮಹಾರಾಷ್ಟ್ರ ಮತ್ತು ಮರಾಠಿ ಮನೂಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಅವನಿಗೆ ತಕ್ಕ ಪಾಠ ಕಲಿಸಿದ್ದೇವೆ. ರಾಜ್ಯದ ಜನರ ಕ್ಷಮೆಯಾಚಿಸುವಂತೆ ಮಾಡಿದ್ದೇವೆಂದು ತಿಳಿಸಿದ್ದಾರೆ.