ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಫೈನಲ್‌ನಲ್ಲಿ ಸ್ಪೇನ್‌ನ ರಫೇಲ್ ನಡಾಲ್ ರೋಚಕ ಗೆಲುವು ಸಾಧಿಸಿದ್ದು, 21ನೇ ಗ್ರ್ಯಾನ್ ಸ್ಲಾಮ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾನುವಾರ ರಾಜಧಾನಿಯಲ್ಲಿ ನಡೆದ ಪಂದ್ಯದಲ್ಲಿ ರಷ್ಯಾದ ಡೇನಿಲ್ ಮೆಡ್ವೆಡೇವ್ ವಿರುದ್ಧ 2-6, 6-7, 6-4, 6-4, 7-5 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: Australian Open: 21ನೇ ಗ್ರ್ಯಾನ್ ಸ್ಲಾಂಗಾಗಿ ನಡಾಲ್, ಮೆಡ್ವೆಡೇವ್ ಪೈಪೋಟಿ
https://twitter.com/AustralianOpen/status/1487791222299242502
ಆರನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿರುವ 35 ವರ್ಷದ ನಡಾಲ್, ಎರಡನೇ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 2009ರಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ನಡಾಲ್ 13 ಬಾರಿ ಫ್ರೆಂಚ್ ಓಪನ್, ನಾಲ್ಕು ಸಲ ಅಮೆರಿಕನ್ ಓಪನ್ ಮತ್ತು ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಇದನ್ನೂ ಓದಿ: 44 ವರ್ಷಗಳ ಬಳಿಕ ಆಸ್ಟ್ರೇಲಿಯಾ ಓಪನ್ ಗೆದ್ದು ತವರಿನ ಪ್ರಶಸ್ತಿ ಬರ ನೀಗಿಸಿದ ಆಶ್ ಬಾರ್ಟಿ

Leave a Reply