ಸಿಡ್ನಿ: ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಮಗಳ ವೀಡಿಯೋ ಒಂದಕ್ಕೆ ಕನ್ನಡ ಹಾಡೊಂದನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ವಾರ್ನರ್ ಗೆ ಭಾರತ ಮತ್ತು ಇಲ್ಲಿನ ಸಿನಿಮಾ, ಹಾಡುಗಳೆಂದರೆ ತುಂಬಾ ಇಷ್ಟ. ವಾರ್ನರ್ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಭಾರತದ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ರಂಜಿಸುತ್ತಿರುತ್ತಾರೆ. ಅದರಲ್ಲೂ ವಾರ್ನರ್‍ಗೆ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ವಿಶೇಷವಾದ ಒಲವಿದೆ. ಹಾಗಾಗಿ ಪ್ರತಿ ಬಾರಿ ಇಲ್ಲಿನ ಸಿನಿಮಾ ಹಾಡುಗಳನ್ನು ಕೇಳುತ್ತಿರುತ್ತಾರೆ. ಅದಲ್ಲದೆ ವಾರ್ನರ್ ಹೈದರಾಬಾದ್ ತಂಡದ ಪರ ಆಡುವುದರಿಂದ ತೆಲುಗು ಹಾಡುಗಳಿಗೆ ಸಾಕಷ್ಟು ಬಾರಿ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ:ಆರ್ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್

ಇದೀಗ ವಾರ್ನರ್ ತಮ್ಮ ಮಗಳ ಮುದ್ದಾದ ವೀಡಿಯೋ ಒಂದಕ್ಕೆ ಕನ್ನಡದ ಚೌಕ ಚಿತ್ರದ ”ಅಪ್ಪ ಐ ಲವ್ ಯು ಪಾ” ಎಂಬ ಹಾಡನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಸಾವಿರಾರು ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಸಲಾಂ ಹೊಡೆದಿದ್ದಾರೆ.
View this post on Instagram
ಈ ವೀಡಿಯೋದಲ್ಲಿ ವಾರ್ನರ್ ಮಗಳು ಐಪಿಎಲ್ ವೇಳೆ ಗ್ಯಾಲರಿಯಲ್ಲಿ ಕೂತು ವಾರ್ನರ್ ಗೆ ಹುರಿದುಂಬಿಸಿರುತ್ತಾಳೆ. ಇದಕ್ಕೆ ವಾರ್ನರ್ ನಾನು ನನ್ನ ಕುಟುಂಬವನ್ನು ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಲು ಬಯಸುತ್ತೇನೆ. ನಾವು ನಮ್ಮ ಅಭಿಮಾನಿಗಳ ಮುಂದೆ ಆಡುವ ಕ್ಷಣದಿಂದ ವಂಚಿತರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

Leave a Reply