ಪ್ರಶಾಂತ್ ಸಂಬರಗಿ ಸಾರಥ್ಯದಲ್ಲಿ ಸಿನಿಮಾವಾಗ್ತಿದೆ ‘ಆಗಸ್ಟ್ 15’ರ ಸ್ಟೋರಿ

ನ್ನಡ ಸಿನಿಮಾ ರಂಗದ ಹಲವು ತಾರೆಯರಿಗೆ ಸಿಂಹಸ್ವಪ್ನವಾಗಿರುವ, ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಇದೀಗ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಆಗಸ್ಟ್ 15ರ ಹಿನ್ನೆಲೆಯಾಗಿಟ್ಟುಕೊಂಡು ಅವರು ಸಿನಿಮಾ ಮಾಡುತ್ತಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ  ಅವರು, ‘ಇದೊಂದು ದೇಶಬಿಟ್ಟು ಹೋದವರ ಕಥೆಯನ್ನು ಹೇಳಲು ಹೊರಟಿದ್ದೇವೆ. ಸ್ವಾತಂತ್ರ್ಯ ದಿನದ ಎರಡು ದಿನದ ಮುಂಚೆ ಭಾರತದಲ್ಲಿ ನಡೆದ ಮಹತ್ವದ ಘಟನೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 13, 14 ಮತ್ತು 15 ಹೀಗೆ ಮೂರು ದಿನಗಳಲ್ಲಿ ನಡೆಯುವಂತಹ ಸಿನಿಮಾ ಇದಾಗಿದೆ’ ಎಂದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

ಇದೊಂದು ಪ್ಯಾನ್ ಇಂಡಿಯಾ ಮಾದರಿಯ ಚಿತ್ರವಾಗಿದ್ದರಿಂದ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾ ರಂಗದ ಕಲಾವಿದರು ಈ ಚಿತ್ರದಲ್ಲಿ ಇರಲಿದ್ದಾರೆ. ಸದ್ದಿಲ್ಲದೇ ಶೇ.90ರಷ್ಟು ಭಾಗದ ಚಿತ್ರೀಕರಣ ಕೂಡ ನಡೆದಿದೆಯಂತೆ. “ಈ ಸಿನಿಮಾವನ್ನು ಒಟ್ಟು 12 ಭಾಷೆಗಳಲ್ಲಿ ತಯಾರಿಸುತ್ತಿದ್ದೇವೆ. ಚೈನೀಸ್ ಭಾಷೆಗೂ ಅದನ್ನು ಡಬ್ ಮಾಡುವ ಆಲೋಚನೆ ಹೊಂದಿದ್ದೇವೆ. ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಶುರುವಾಗಲಿದೆ. ಹಾಗಂತ ಇದು ದಿ ಕಾಶ್ಮೀರ್ ಫೈಲ್ಸ್ ಮಾದರಿಯ ಚಿತ್ರವಲ್ಲ. ಮನರಂಜನೆಯ ಜತೆ ಜತೆಗೆ ಒಂದು ನಿಜ ಸಂಗತಿಯನ್ನು ಈ ಸಿನಿಮಾದ ಮೂಲಕ ಬಯಲು ಮಾಡುತ್ತಿದ್ದೇವೆ’ ಎನ್ನುವುದು ಪ್ರಶಾಂತ್ ಸಂಬರಗಿ ಮಾತು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

‘ಕೇರಾಫ್ ಫುಟ್ ಪಾತ್’ ಚಿತ್ರ ಖ್ಯಾತಿಯ ಕಿಶನ್ ಮತ್ತು ಅವರ ತಂದೆ ಶ್ರೀಕಾಂತ್ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಟೀನೇಟ್ ಸಿನಿಮಾದ ನಂತರ ಬರುತ್ತಿರುವ ಇವರ ಚಿತ್ರ ಇದಾಗಿದೆ. ಸಿನಿಮಾದ ಕಲಾವಿದರ ಮತ್ತು ತಂತ್ರಜ್ಞರ ವಿವರವನ್ನು ಸದ್ಯಕ್ಕೆ ಬಹಿರಂಗ ಪಡಿಸಿಲ್ಲ ಚಿತ್ರತಂಡ. ಬೇರೆ ರೀತಿಯಲ್ಲಿ ಅದನ್ನು ಲಾಂಚ್ ಮಾಡಬೇಕಾಗಿದ್ದರಿಂದ ಇದಷ್ಟೇ ಮಾಹಿತಿಯನ್ನು ಪ್ರಶಾಂತ್ ಸಂಬರಗಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *