ನನ್ನನ್ನು ಕಳ್ಳತನ ಕೇಸ್‍ನಲ್ಲಿ ಅರೆಸ್ಟ್ ಮಾಡಿಲ್ಲ – ಎರಡನೇ ಮದುವೆ ಕೂಡ ಆಗಿಲ್ಲ: ಅಟ್ಟಿಕಾ ಬಾಬು ಸ್ಪಷ್ಟನೆ

ಬೆಂಗಳೂರು: ನನ್ನನ್ನು ಯಾವುದೇ ಕಳ್ಳತನದ ಕೇಸ್‌ನಲ್ಲಿ ಪೊಲೀಸರು ಅರೆಸ್ಟ್ ಮಾಡಿಲ್ಲ. ನಂಗೆ ಎರಡನೇ ಮದುವೆ ಕೂಡ ಆಗಿಲ್ಲ ಎಂದು ಪ್ರಸಿದ್ಧ ಚಿನ್ನದ ವ್ಯಾಪಾರಿ ಅಟ್ಟಿಕಾ ಗೋಲ್ಡ್ (Attica Gold) ಮಾಲೀಕರಾದ ಅಟ್ಟಿಕಾ ಬಾಬು (Attica Babu) ಅಲಿಯಾಸ್ ಬೊಮ್ಮನಹಳ್ಳಿ ಬಾಬು ಆಂಧ್ರಪ್ರದೇಶದ ಪೊಲೀಸರು (Police) ಬಂಧಿಸಿದ್ದ ಪ್ರಕರಣಕ್ಕೆ  ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಅಣ್ಣನ ಮಗನನ್ನು ನಾನೇ ಸಾಕಿಕೊಂಡಿದ್ದೆ. ಅವನನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆ ಮಾಡಿಕೊಟ್ಟಿದ್ದೆ. ಹೆಂಡತಿ ಮನೆಯಲ್ಲಿ ವಾಸವಾಗಿದ್ದ, ಆದರೆ ಅವರ ಕುಟುಂಬದಲ್ಲಿ ಗಲಾಟೆ ಆಗಿದೆ. ಆಗ ಅಣ್ಣನ ಮಗನ ಹೆಂಡತಿ ವರದಕ್ಷಿಣೆ ಕಿರುಕುಳ ಕೇಸ್ ಹಾಕಿದ್ಲು. ಅದರಲ್ಲಿ ನನ್ನ ಮತ್ತು ನನ್ನ ಕುಟುಂಬದ ಹೆಸರು ಕೂಡ ಸೇರಿಸಿದ್ದಾರೆ. ಹಾಗಾಗಿ ಪೊಲೀಸರು ಬಂದು ನೋಟಿಸ್‍ಗೆ ಉತ್ತರ ನೀಡಲು ಹೇಳಿದ್ದರು. ಈ ಕಾರಣಕ್ಕೆ ನಾನು ಆಂಧ್ರಪ್ರದೇಶಕ್ಕೆ ಹೋಗಿದ್ದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕೇಸ್‌ ಕೂಡ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 2ನೇ ಮದುವೆಯಾಗಿ ಮೋಸ ಮಾಡಿದ್ದಾರೆಂದು ಮಹಿಳೆ ಆರೋಪ – ಅಟ್ಟಿಕಾ ಗೋಲ್ಡ್‌ ಮಾಲೀಕ ಬಂಧನ

ಏನಿದು ಪ್ರಕರಣ:
ಎರಡನೇ ಮದುವೆಯಾಗಿ ಮೋಸ ಮಾಡಿರುವುದಾಗಿ ಮಹಿಳೆಯೊಬ್ಬರು ಆಂಧ್ರಪ್ರದೇಶದಲ್ಲಿ ಅಟ್ಟಿಕಾ ಬಾಬು ವಿರುದ್ಧ ದೂರು ದಾಖಲಿಸಿದ್ದರು. ಹಾಗಾಗಿ ಬೆಂಗಳೂರಿಗೆ ಆಗಮಿಸಿದ ಆಂಧ್ರಪ್ರದೇಶ ಪೊಲೀಸರು ಡಿ.16 ರಂದು ಬಾಬುರನ್ನು ಬಂಧಿಸಿದ್ದರು. ಅಟ್ಟಿಕಾ ಬಾಬು, ಶೇಕ್ ಮೀನಾಜ್ ಎಂಬಾಕೆಯನ್ನು ಮದುವೆಯಾಗಿದ್ದು, ಡಿಸೆಂಬರ್ 12 ರಂದು ಯಲ್ಲೂರಿಗೆ ಹೋಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಶೇಕ್ ಮೀನಾಜ್ ಆರೋಪಿಸಿದ್ದರು. ಇದನ್ನೂ ಓದಿ: ಮಧ್ಯರಾತ್ರಿ ಫೋನ್‍ನಲ್ಲಿ ಮಾತನಾಡಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಹಲ್ಲೆಯ ಬಳಿಕ ಅಟ್ಟಿಕಾ ಬಾಬು ವಿರುದ್ಧ ಶೇಕ್ ಮೀನಾಜ್ ಕೊಲೆಗೆ ಯತ್ನ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಯಲ್ಲೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ IPC section 448,342,307,386,427,498,506 ಮತ್ತು ವರದಕ್ಷಿಣೆ ಕಿರುಕುಳ ಅರೋಪದಡಿ ಕೇಸ್ ದಾಖಲಾಗಿತ್ತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *