ಅಪ್ರಾಪ್ತ ಬಾಲಕಿ ಮೇಲೆ ರೈಲ್ವೇ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಯತ್ನ

-ಕುಟುಂಬಸ್ಥರು, ಪ್ರಯಾಣಿಕರ ಥಳಿತಕ್ಕೆ ಸಾವು

ಪಾಟ್ನಾ: 11 ವರ್ಷದ ಬಾಲಕಿ ಮೇಲೆ 34 ವರ್ಷದ ರೈಲ್ವೇ ಸಿಬ್ಬಂದಿ ದೌರ್ಜನ್ಯ ಎಸಗಿರುವ ಘಟನೆ ಬಿಹಾರದ ಹಮ್‌ಸಫರ್ ಎಕ್ಸ್‌ಪ್ರೆಸ್‌ನಲ್ಲಿ (Hamsafar Express) ಮಂಗಳವಾರ ರಾತ್ರಿ ನಡೆದಿದೆ.

ಆರೋಪಿ ರೈಲ್ವೇ ಸಿಬ್ಬಂದಿಯನ್ನು ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಳಿಕ ಪ್ರಯಾಣಿಕರು ಹಾಗೂ ಕುಟುಂಬದವರ ಹೊಡೆತಕ್ಕೆ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

ಲಕ್ನೋ ಮತ್ತು ಕಾನ್ಪುರಗೆ ಪ್ರಯಾಣಿಸುತ್ತಿದ್ದ ಹಮ್‌ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ 11 ವರ್ಷದ ಬಾಲಕಿ ಮೇಲೆ 34 ವರ್ಷದ ರೈಲ್ವೇ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾನೆ.

ಸಂತ್ರಸ್ತೆಯ ತಾಯಿ ಹೊರಗೆ ಹೋಗಿದ್ದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಬಾಲಕಿ ತನ್ನ ತಾಯಿಗೆ ನಡೆದ ವಿಷಯವನ್ನು ಹೇಳಿದ್ದಾಳೆ. ಇದರಿಂದ ಆಕೆಯ ಕುಟುಂಬದವರು ಹಾಗೂ ಪ್ರಯಾಣಿಕರು ಸೇರಿ ಆರೋಪಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಕಾನ್ಪುರದ (Kanpur) ಜಿಆರ್‌ಪಿ (GRP) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಮೇಲೆ ಪೋಕ್ಸೋ ಕೇಸ್ ದಾಖಲಿಸಲಾಗಿತ್ತು. ಆದರೆ ಹೊಡೆತಕ್ಕೊಳಗಾದ್ದರಿಂದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವನು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.ಇದನ್ನೂ ಓದಿ: ಭಾರತಕ್ಕೆ ಮತ್ತೆ ವಾಪಸ್ ಬರಲಿದೆ ಫೋರ್ಡ್