ತಹಶೀಲ್ದಾರ್‌ಗೆ ಕಾಲಿಂದ ಒದ್ದು ಹಲ್ಲೆ- ಬಿಎಸ್‍ಪಿ ಮುಖಂಡನ ವಿರುದ್ಧ FIR ದಾಖಲು

ಬೀದರ್: ತಹಶೀಲ್ದಾರ್‌ಗೆ ಕಾಲಿಂದ ಒದ್ದು ಹಲ್ಲೆ ಮಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಂಕುಶ್ ಗೋಖಲೆ ಹಾಗೂ ಇತರರ ವಿರುದ್ದ ಎಫ್.ಐಆರ್ ದಾಖಲಾಗಿದೆ.

ಮನವಿ ಸ್ವೀಕಾರ ವಿಚಾರಕ್ಕಾಗಿ ಬಿಎಸ್ಪಿ ನಾಯಕ ಅಂಕುಶ್ ಗೋಖಲೆ ತಹಶೀಲ್ದಾರ್‌ ಅವರಿಗೆ ಒದ್ದು ಹಲ್ಲೆ ಮಾಡಿದ್ದು, ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಇಂದು ಘಟನೆ ಇಂದು ನಡೆದಿತ್ತು.

ಕಾಲಿಂದ ಒದ್ದು ಹಲ್ಲೆ ಮಾಡಿದ್ದಾರೆ. ಬೆಂಬಲಿಗರು ಚೇರ್‌ಗಳನ್ನು ಬಿಸಾಡುತ್ತಾ, ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದವರ ವಿರುದ್ದ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಹುಮ್ನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ್ ಹೀರೆಮಠ ಎಫ್ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

ಮೊತ್ತೊಂದು ಕಡೆ ತಹಶೀಲ್ದಾರ್ ಪ್ರದೀಪ್ ಕುಮಾರ್ ವಿರುದ್ಧ ಬಿಎಸ್ಪಿ ಮುಖಂಡರು ಜಾತಿ ನಿಂದನೆ ಕೌಂಟರ್ ಕೇಸ್ ದಾಖಲು ಮಾಡಿದ್ದಾರೆ. ತಹಶೀಲ್ದಾರ್ ಮತ್ತು ಸಿಬ್ಬಂದಿ ವಿರುದ್ದ ಜಾತಿ ನಿಂಧನೆ ಹಾಗೂ ಹಲ್ಲೆ ಮಾಡಿದ್ದಾರೆ ಎಂದು ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ್, ದತಾತ್ರಿ ಎಂಬ ಬಿಎಸ್ಪಿ ಪಕ್ಷದ ಮುಖಂಡರು ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ:  ನಿರುದ್ಯೋಗ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದೆ: ವರುಣ್ ಗಾಂಧಿ

Comments

Leave a Reply

Your email address will not be published. Required fields are marked *