ಜಿರಳೆ ಔಷಧಿ ಸ್ಪ್ರೇ ಮಾಡಿ ಹೈಟೆಕ್ ಆಗಿ ಎಟಿಎಂ ಕಳ್ಳತನಕ್ಕಿಳಿದ ಕಿರಾತಕ ಅಂದರ್

ಬೆಂಗಳೂರು: ಒಬ್ಬಂಟಿಯಾಗಿ ಯಾರ ಸಹಾಯವನ್ನು ಪಡೆಯದೆ, ಯಾವುದೇ ಗ್ಯಾಂಗ್ ಕಟ್ಟಿಕೊಳ್ಳದೆ ಎಟಿಎಂ ಸ್ಕಿಮ್ಮಿಂಗ್ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿನ ಪ್ರಮುಖ ಎಟಿಎಂಗಳನ್ನು ಟಾರ್ಗೆಟ್ ಮಾಡುತ್ತಿದ್ದ ನೈಜಿರಿಯಾ ಮೂಲದ ಆರೋಪಿ ಸೆಕ್ಯೂರಿಟಿಗೂ ಗೊತ್ತಾಗದ್ದಂತೆ ಎಟಿಎಂಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದನು. ಸ್ಕಿಮ್ಮಿಂಗ್ ಮಿಷನ್ ನಿಂದ ಮಾಹಿತಿ ಕಳ್ಳತನ ಮಾಡುತ್ತಿದ್ದ ಈತ, ಗ್ರಾಹಕರಿಗೆ ತಿಳಿಯದೆ ಹಣ ಎಗರಿಸುತ್ತಿದ್ದನು. ಸದ್ಯ ಈತನ ಕೃತ್ಯ ಬೆಳಕಿಗೆ ಬಂದಿದ್ದು, ರಾಜಾಜಿನಗರ ಪೊಲೀಸರು ಆರೋಪಿಯನು ಬಂಧಿಸಿದ್ದಾರೆ.

ಜಿರಳೆ ಔಷಧಿ ಬಳಕೆ: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದ ಆರೋಪಿ ಈ ವೇಳೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗದಂತೆ ಮಾಡಲು ಜಿರಳೆ ಔಷಧಿ ಬಳಕೆ ಮಾಡುತ್ತಿದ್ದನು. ತನ್ನೊಂದಿಗೆ ಜಿರಳೆ ಔಷಧಿ ಸ್ಪ್ರೇ ತರುತ್ತಿದ್ದ ಆರೋಪಿ ಅದನ್ನು ಕ್ಯಾಮೆರಾಗೆ ಸ್ಪ್ರೇ ಮಾಡುತ್ತಿದ್ದನು. ಇದರಿಂದ ಕ್ಯಾಮೆರಾ ಮಬ್ಬಾಗಿ ಕಾಣುತ್ತದೆ. ಈ ವೇಳೆ ತನ್ನ ಕೃತ್ಯ ಎಸಗುತ್ತಿದ್ದನು.ಇದನ್ನು ಓದಿ: ನಿಮಗೆ ತಿಳಿಯದೆ ಖಾತೆಯಿಂದ ಹಣ ಡ್ರಾ ಆಗೋದು ಹೇಗೆ- 1.35 ನಿಮಿಷದ ವೈರಲ್ ವಿಡಿಯೋ ನೋಡಿ 

ಆರೋಪಿಯ ಚಲನವಲನಗಳು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳು ಮಬ್ಬಾಗಿರುವುದನ್ನು ಕಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮಾಹಿತಿಯ ಆಧಾರದ ಮೇಲೆ ರಾಜಾಜಿನಗರ ಪೊಲೀಸರು ಕಾರ್ಯಚಾರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *