ಕೆಎಲ್ ರಾಹುಲ್ ಪೋಸ್ಟ್‌ಗೆ ಅಥಿಯಾ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ

ಬೆಂಗಳೂರು: ಟೀಂ ಇಂಡಿಯಾ ಭರವಸೆಯ ಆಟಗಾರ ಕೆಎಲ್ ರಾಹುಲ್ ಹಾಗೂ ಬಿಟೌನ್ ಬೆಡಗಿ ಅಥಿಯಾ ಶೆಟ್ಟಿ ರಿಲೇಶನ್‍ನಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಅಲ್ಲದೇ ಈ ಇಬ್ಬರು ಸುತ್ತಾಟ ನಡೆಸುತ್ತಿದ್ದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ರಾಹುಲ್ ತಮ್ಮ ಇನ್‍ಸ್ಟಾದಲ್ಲಿ ಅಥಿಯಾರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿದ್ದು, ಈ ಪೋಸ್ಟ್‌ಗೆ ಅಥಿಯಾ ತಂದೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಈ ಫೋಟೋಗೆ ಬಾಲಿವುಡ್ ‘ಹೇರಾ ಫೇರಿ’ ಸಿನಿಮಾದ ಖ್ಯಾತ ಡೈಲಾಗ್ ‘ಹಲೋ ದೇವಿ ಶ್ರೀಪ್ರಸಾದ್’ ಎಂಬ ಹಣೆ ಬರಹ ನೀಡಿದ್ದರು. ಈ ಫೋಟೋ ಇನ್‍ಸ್ಟಾದಲ್ಲಿ ವೈರಲ್ ಆಗಿದ್ದು, ಇದುವರೆಗೂ 8 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿ, 3 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.

ಫೋಟೋದಲ್ಲಿ ರಾಹುಲ್ ಹಳೆಯ ಮಾದರಿಯ ಟೆಲಿಫೋನ್ ಹಿಡಿದು ಗಂಭೀರವಾಗಿ ಕಾಣಿಸುತ್ತಿದ್ದರೆ, ಅಥಿಯಾ ಕ್ಯಾಮೆರಾಗೆ ಪೋಸ್ ಕೊಟ್ಟು ನಗೆ ಚೆಲ್ಲಿದ್ದಾರೆ. ಇತ್ತ ಫೋಟೋಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಸೂಪರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಸುನೀಲ್ ಶೆಟ್ಟಿ ಅವರ ಈ ಪ್ರತಿಕ್ರಿಯೆ ಕೆಎಲ್ ರಾಹುಲ್ ಅವರ ಅಭಿಮಾನಿಗಳಲ್ಲಿ ಹೊಸ ಸಂದೇಹಗಳಿಗೆ ಕಾರಣವಾಗಿದ್ದು, ಇಬ್ಬರು ನಡುವೆ ಏನೋ ನಡೆಯುತ್ತಿದೆ ಎಂಬ ಅಂಶವನ್ನು ತೆರೆದಿಟ್ಟಿದೆ. ಇತ್ತ ರಾಹುಲ್ ಗೆಳೆಯ, ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿ, ‘ತುಂಬಾ ಕ್ಯೂಟ್’ ಆಗಿದ್ದೀರಿ ಎಂದಿದ್ದಾರೆ. ಮತ್ತೊಬ್ಬ ಆಟಗಾರ ಶಿಖರ್ ಧವನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇತ್ತ ಟೀಂ ಇಂಡಿಯಾ ಪರ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದು, ಟೆಸ್ಟ್ ಪಂದ್ಯಗಳಲ್ಲಿ ಕರ್ನಾಟಕ ಮತ್ತೊಬ್ಬ ಆಟಗಾರ ಮಯಾಂಕ್ ಅಗರ್ವಾಲ್‍ರೊಂದಿಗೆ ಸ್ಥಾನ ಪಡೆದಿದ್ದಾರೆ.

https://www.instagram.com/p/B6mw63tgkxp/?utm_source=ig_web_button_share_sheet

Comments

Leave a Reply

Your email address will not be published. Required fields are marked *