ವಾಜಪೇಯಿ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದ ಲಕ್ನೋ ಕಾರ್ಪೋರೇಷನ್

ಲಕ್ನೋ: ಮಾಜಿ ಪ್ರಧಾನಿ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮೇರು ನಾಯಕ. ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯೂ ಕೂಡ ವಾಜಪೇಯಿ ಅವರಿಗೆ ಇದೆ. ಆದರೆ ಲಕ್ನೋದ ಮಹಾನಗರ ಪಾಲಿಕೆ ಮಾತ್ರ ಅವರ ಹೆಸರನ್ನು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ.

ಹೌದು. ಉತ್ತರ ಪ್ರದೇಶದ ಲಕ್ನೋ ಕಾರ್ಪೋರೇಷನ್ ವಾಜಪೇಯಿ ಅವರ ಮತದಾನದ ಪಟ್ಟಿಯಿಂದ ತೆಗೆದಿದೆ. ಈ ಬಗ್ಗೆ ಮಾತನಾಡಿದ ಕ್ಷೇತ್ರ ಚುನಾವಣೆ ಅಧಿಕಾರಿ, ದೇಶ ಕಂಡ ಅತ್ಯಂತ ಮೇರು ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಾಜಪೇಯಿ ಅವರು ಕಳೆದ ವಿಧಾನ ಸಭಾ ಹಾಗೂ ಲೋಕಸಭಾ ಸೇರಿದಂತೆ ಕಾರ್ಪೋರೇಷನ್ ಚುನಾವಣೆಗೆ ಮತದಾನ ಮಾಡಿಲ್ಲದ ಕಾರಣ ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ 10 ವರ್ಷಗಳಿಂದ ಲಕ್ನೋದಲ್ಲಿ ಅವರು ವಾಸ ಮಾಡುತ್ತಿಲ್ಲ. ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದೇವೆ. 1054 ಮತದಾನದ ಸಂಖ್ಯೆಯು ಲಕ್ನೋದ ಬಾಬು ಬನ್ಸಾರಿ ದಾಸ್ ವಾರ್ಡ್‍ಬಲ್ಲಿ ವಾಸಿಸುತ್ತಿರುವಾಗಲೇ ಮಾಡಿಸಿದ್ದು. ಅವರು ಸದ್ಯ ದೆಹಲಿ 6-ಎ ಲುಟೆನ್ಸ್ ನಲ್ಲಿರುವ ನಿವಾಸದಲ್ಲಿ ವಾಸ ಮಾಡುತ್ತಿದ್ದು, ಕಳೆದ 2000ರಲ್ಲಿ ಮತದಾನ ಮಾಡಿದ್ದರು. ಇದಾದ ಬಳಿಕ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. 2006ರಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ದಿನೇಶ್ ಶರ್ಮಾ ಅವರ ಪರವಾಗಿ ಪ್ರಚಾರ ನಡೆಸಿದ್ದರು.

ಸದ್ಯ ಲಕ್ನೋದಲ್ಲಿರುವ ವಾಜಪೇಯಿ 92/98-1 ಬಸ್ಮಂಡಿಯಲ್ಲಿರುವ ನಿವಾಸವು ಕಿಸಾನ್ ಸಂಘ ಕಚೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. 10 ವರ್ಷವಾದರೂ ಲಕ್ನೋದಲ್ಲಿನ ನಿವಾಸಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಅವರ ಹೆಸರು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಕ್ಷೇತ್ರ ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *