ಕರ್ನಾಟಕ ಸೇರಿದಂತೆ ದೇಶದ 100 ನದಿಗಳಲ್ಲಿ ಅಟಲ್ ಅಸ್ಥಿ ವಿಸರ್ಜನೆ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಗಳನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ತೀರ್ಮಾನಿಸಲಾಗಿದ್ದು, ಚಿತಾಭಸ್ಮವನ್ನು ಇಂದು ಕುಟುಂಬಸ್ಥರು ಸಂಗ್ರಹಿಸಿದರು.

ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಬಳಿಕ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ಥಿ ವಿಸರ್ಜನೆಗೆ ತೆಗೆದುಕೊಂಡು ಹೋಗಲಾಯಿತು.

ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹರಿದ್ವಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅಟಲ್ ಅವರ ಅಸ್ಥಿಯಯನ್ನು ಕರ್ನಾಟಕದ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಗುರುಪುರ, ತುಂಗಾ, ಭದ್ರಾ, ತುಂಗಾಭದ್ರಾ, ಕಾಳಿ ಹಾಗೂ ಘಟಪ್ರಭಾ ನದಿಗಳಲ್ಲಿಯೂ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ವಾಜಪೇಯಿ ಅವರ ಸ್ಮರಣೆ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಿಲ್ಲಾ, ತಾಲೂಕು ಹಾಗೂ ಪಂಚಾಯತ್ ಕೇಂದ್ರಗಳಲ್ಲೂ ಪ್ರಾರ್ಥನಾ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *