ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

ಬಳ್ಳಾರಿ: ಹಂಪಿಯ ಸಾಂಸ್ಕೃತಿಕ ಉತ್ಸವದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಕಳೆದಿನ ಅಷ್ಟೇ ಪೂಜಾರಿ ವಿದೇಶಿ ಹೊಡುಗಿಯ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ. ಈಗ ಮತ್ತೆ ಕಾಮುಕನೊಬ್ಬ ಮಹಿಳೆಯ ಪಕ್ಕ ಮಲಗಿ ಕಾಮಚೇಷ್ಟೆ ಮಾಡಿದ್ದು, ಸ್ಥಳೀಯರಿಂದ ಹಿಗ್ಗಾಮುಗ್ಗಾ ಏಟು ತಿಂದಿರುವ ಘಟನೆ ನಡೆದಿದೆ.

ಮೂಲತಃ ಬೆಳಗಾವಿಯ ಸಚಿನ್ ಎಂಬಾತ ಸ್ಥಳೀಯರಿಂದ ಏಟು ತಿಂದ ಕಾಮುಕ. ಹಂಪಿಯ ಸಾಂಸ್ಕøತಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯು ಪ್ರದರ್ಶನ ಮುಗಿದ ಮೇಲೆ ರಾತ್ರಿ ಅಲ್ಲಿಯೇ ಮಲಗಿ ಕೊಂಡಿದ್ದಾರೆ. ಈ ವೇಳೆ ಮಧ್ಯರಾತ್ರಿ ಮಹಿಳೆಯು ಮಲಗಿದ್ದ ಸ್ಥಳಕ್ಕೆ ಬಂದ ಸಚಿನ್ ತನ್ನ ಕಾಮಚೇಷ್ಟೆಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಕಂಡು ಆತಂಕಗೊಂಡ ಮಹಿಳೆಯು ಕೂಗಿಕೊಂಡಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಸ್ಥಳೀಯ ವ್ಯಾಪಾರಿಗಳು ಸಚಿನ್‍ನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಸಚಿನ್ ಶನಿವಾರ ಉತ್ಸವದಲ್ಲಿ ವಿದೇಶಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತನೆ ಮಾಡಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಹಂಪಿ ಉತ್ಸವದಲ್ಲಿ ಕಾಮುಕರ ಉಪಟಳ ಹೆಚ್ಚಳವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *