ವಯಸ್ಸು 63 ಆದ್ರೂ ಐವರು ಗರ್ಲ್ ಫ್ರೆಂಡ್-ಇದು ಶೋಕಿಲಾಲ ತಾತನ ಕಥೆ

ನವದೆಹಲಿ: ಕೆಲವರಿಗೆ ವಯಸ್ಸಾದ್ರೂ ಚಪಲ ಮಾತ್ರ ಕಡಿಮೆ ಆಗಲ್ಲ. ಅಂತಹ ವ್ಯಕ್ತಿಯೊಬ್ಬನು 63 ವರ್ಷವಾದ್ರೂ, ಈತನಿಗೆ ಐವರು ಗರ್ಲ್ ಫ್ರೆಂಡ್ ಇದ್ದಾರೆ ಅಂತೆ. ಐವರು ಗರ್ಲ್ ಫ್ರೆಂಡ್ ಇದ್ದರೂ, ಈತನಿಗೆ ಕೈಯಲ್ಲಿ ಒಂದು ಕೆಲಸವಿಲ್ಲ. ಯುವತಿಯರ ಜೊತೆ ಐಶಾರಾಮಿ ಜೀವನ ನಡೆಸಲು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧು ಸಿಂಗ್ ಬಂಧಿತ ಚಪಲ ಚೆನ್ನಿಗರಾಯ. ಬಂಧು ಸಿಂಗ್‍ಗೆ ವಯಸ್ಸು 63 ಆದರೂ ಮದುವೆ ಆಗಿಲ್ಲ. ಕೇವಲ ಯುವತಿಯರೊಂದಿಗೆ ಮೋಜು, ಮಸ್ತಿ ಮಾಡುವ ಮೂಲಕ ಜೀವನ ಸಾಗಿಸುತ್ತಾ ಬಂದಿದ್ದಾನೆ. ಮೋಜು ಮಸ್ತಿ ನಡೆಸಲು ಬೇಕಾಗುವ ಹಣಕ್ಕಾಗಿ ಕಳ್ಳತನ ಮಾಡಿಕೊಂಡಿದ್ದ. ಆದರೆ ಇವರೆಗೂ ಬಂಧು ಸಿಂಗ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಸದ್ಯ ಕಳ್ಳತನದ ಆರೋಪದಡಿಯಲ್ಲಿ ರೋಹಿಲ್ಲಾ ಠಾಣೆಯ ಪೊಲೀಸರು ಬಂಧು ಸಿಂಗ್‍ನನ್ನು ಬಂಧಿಸಿದ್ದಾರೆ.

ಸಿಕ್ಕಿದ್ದು ಹೇಗೆ?:
ಜುಲೈ 28ರ ರಾತ್ರಿ ಬಂಧು ಸಿಂಗ್, ರೋಹಿಲ್ಲಾದ ಇಂಡಸ್ಟ್ರಿ ಏರಿಯಾದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನು. ಕೆಲವು ಕಳ್ಳತನದ ದೃಶ್ಯಗಳು ಫ್ಯಾಕ್ಟರಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ರೊಹಿಲ್ಲಾ ಠಾಣೆಯ ಎಎಸ್‍ಪಿ ಪಿಯೂಷ್, ಎಸ್‍ಹೆಚ್‍ಓ ರಾಮಚಂದ್ರ ತಂಡ ಆರೋಪಿ ಬಂಧು ಸಿಂಗ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧು ಸಿಂಗ್ ಆನಂದ ಪರ್ವತ ನಗರದ ನಿವಾಸಿಯಾಗಿದ್ದು, ಅವಿವಾಹಿತನಾಗಿದ್ದಾನೆ. ಆರೋಪಿ ಐವರು ಗರ್ಲ್ ಫ್ರೆಂಡ್‍ಗಳನ್ನು ಹೊಂದಿದ್ದು, ಅವರನ್ನು ಸಂತೋಷವಾಗಿ ಇರಿಸಲು ಕಳ್ಳತನ, ದರೋಡೆ ಮಾಡಿಕೊಂಡಿದ್ದನು ಎಂದು ತನಿಖೆ ವೇಳೆ ಹೇಳಿದ್ದಾನೆ. ಬಂಧಿತನಿಂದ 2 ಲ್ಯಾಪ್‍ಟಾಪ್, ಎಲ್‍ಇಡಿ ಸ್ಕ್ರೀನ್ ಮತ್ತು 5 ಸಾವಿರ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಎಸ್‍ಪಿ ನೂಪುರ ಚಂದ್ರ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *