ಸಿರಿಯಾದಲ್ಲಿ ಉಗ್ರರ ಅಟ್ಟಹಾಸ – ಡ್ರೋನ್‌ ದಾಳಿಗೆ 100 ಕ್ಕೂ ಹೆಚ್ಚು ಮಂದಿ ಬಲಿ

ಡೆಮಾಸ್ಕಸ್: ಸಿರಿಯಾದಲ್ಲಿ (Syria Attack) ಉಗ್ರರ ಅಟ್ಟಹಾಸಕ್ಕೆ 100 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸಮಾರಂಭದ ವೇಳೆ ಸಿರಿಯಾದ ಹೋಮ್ಸ್ ಪ್ರಾಂತ್ಯದ ಮಿಲಿಟರಿ ಕಾಲೇಜಿನ ಮೇಲೆ ನಡೆದ ಡ್ರೋನ್ ದಾಳಿಗೆ ಕನಿಷ್ಠ 100 ಮಂದಿ ಬಲಿಯಾಗಿದ್ದಾರೆ. 240 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ 6 ಮಕ್ಕಳು ಸೇರಿದ್ದಾರೆ. ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಹಸನ್ ಅಲ್-ಗಬಾಶ್ ತಿಳಿಸಿದ್ದಾರೆ. ಇದನ್ನೂ ಓದಿ: ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

ಸ್ಫೋಟಕಗಳನ್ನು ಹೊತ್ತ ಡ್ರೋನ್‌ಗಳು ಸಮಾರಂಭವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಸಿರಿಯಾದ ಮಿಲಿಟರಿ ತಿಳಿಸಿದೆ. ದಾಳಿಯ ಹೊಣೆಗಾರಿಕೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ ಎಂದು ಹೇಳಿದೆ.

ಸಿರಿಯಾದ ರಕ್ಷಣಾ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ದಾಳಿಗೂ ಕೆಲವೇ ಸಮಯಗಳ ಮುಂಚೆ ಅವರು ಹೊರಟು ಹೋಗಿದ್ದರು. ಅದಾದ ಬಳಿಕ ಡ್ರೋನ್‌ ದಾಳಿ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]