ತಮ್ಮದೇ ತೋಟದಲ್ಲಿ 1,600 ತಳಿಯ ಮಾವು ಬೆಳೆದ ಭಾರತದ ಮ್ಯಾಂಗೋ ಮ್ಯಾನ್

Haji Kalimullah Khan

ಲಕ್ನೋ: ಭಾರತದ ಮ್ಯಾಂಗೋ ಮ್ಯಾನ್ ಎಂದೇ ಫೇಮಸ್ ಆಗಿರುವ 82 ವಯಸ್ಸಿನ ಹಾಜಿ ಕಲೀಮುಲ್ಲಾ ಖಾನ್ ಅವರು ಬಾಲ್ಯದಿಂದ ಮಾವಿನ ಹಣ್ಣನ್ನು ಬೆಳೆಸಲು ಪ್ರಾರಂಭಿಸಿ ಇದೀಗ ಉತ್ತರ ಪ್ರದೇಶದಲ್ಲಿರುವ ತಮ್ಮ ತೋಟದಲ್ಲಿ 1,600 ತಳಿಯ ಮಾವಿನ ಹಣ್ಣಿನ ಮರವನ್ನು ಬೆಳೆಸುತ್ತಿದ್ದಾರೆ.

ಲಕ್ನೋ ಮೂಲದ ಹಾಜಿ ಕಲೀಮುಲ್ಲಾ ಖಾನ್ ಅವರು ಚಿಕ್ಕವರಿದ್ದಾಗ ತಮ್ಮ ಪೂರ್ವಜರು ಬೆಳೆಸಿದ ಮಾವಿನ ಮರಗಳ ಸುತ್ತಾಮುತ್ತಾ ಕಣ್ಣಾಮುಚ್ಚಾಲೆ ಆಟವನ್ನು ಆಡುತ್ತಿದ್ದರು. ಈ ವೇಳೆ ಸಿಹಿಯಾದ ಮಾವಿನ ಹಣ್ಣನ್ನು ಸವಿಯುತ್ತಿದ್ದರು. ಇದೀಗ ಪ್ರೀತಿಯಿಂದ ತಮ್ಮ ಎಂಟು ಎಕರೆ ಭೂಮಿಯಲ್ಲಿ 1,600 ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣಿನ ಮರವನ್ನು ನೆಟ್ಟಿದ್ದಾರೆ.  ಇದನ್ನೂ ಓದಿ: ಮೇಘಸ್ಫೋಟಕ್ಕೆ ಸುಳ್ಯದ 4 ಗ್ರಾಮಗಳು ತತ್ತರ- ರಾತ್ರಿ ಇದ್ದ ಅಂಗಡಿ ಬೆಳಗ್ಗೆ ಮಾಯ!

ಹಾಜಿ ಕಲೀಮುಲ್ಲಾ ಖಾನ್ ಅವರು 7ನೇ ತರಗತಿಯಲ್ಲಿದ್ದಾಗ ಮೊದಲು ಮಾವಿನ ಮರವನ್ನು ನೆಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ಒಂದೇ ಮರದಿಂದ ಏಳು ವಿಧದ ಹಣ್ಣುಗಳನ್ನು ಬೆಳೆಸುವ ಕಸಿ ವಿಧಾನವನ್ನು ಕಲಿತುಕೊಂಡರು. ಇಂದು ಅವರ ಜಮೀನಿನಲ್ಲಿ 120 ವರ್ಷ ಹಳೆಯ ಮಾವಿನ ಮರವಿದ್ದು, ವಿವಿಧ ರುಚಿ, ಬಣ್ಣ, ವಿನ್ಯಾಸ ಮತ್ತು ವಾಸನೆಯ 30 ಬಗೆಯ ಮಾವಿನ ಹಣ್ಣುಗಳಿವೆ.

ವಿಶೇಷವೆಂದರೆ, ಇವರು ಬೆಳೆಸಿರುವ ಮಾವಿನ ಹಣ್ಣುಗಳಿಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯ ವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಇದನ್ನೂ ಓದಿ: CM ಆಗೋದು ತಪ್ಪಿಸೋಕೆ ಯಾರಿಂದ್ಲೂ ಸಾಧ್ಯವಿಲ್ಲ- ಸೋನಿಯಾ ತಾಯಿ ಪ್ರೀತಿ ಮೇಲೆ ನಂಬಿಕೆಯಿದೆ: ಡಿಕೆಶಿ

ತೋಟಗಾರಿಕೆ ಕ್ಷೇತ್ರಕ್ಕೆ ಹಾಜಿ ಕಲೀಮುಲ್ಲಾ ಖಾನ್ ಅವರು ನೀಡಿದ ಕೊಡುಗೆಗಳು, ಮಾವಿನ ತಳಿಗಳನ್ನು ಸಂರಕ್ಷಿಸಲು ಮತ್ತು ವಿಸ್ತರಿಸಲು ಅವರು ಪಟ್ಟ ಶ್ರಮಕ್ಕಾಗಿ 2008ರಲ್ಲಿ ಹಾಜಿ ಕಲೀಮುಲ್ಲಾ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.

ಮಾವಿನ ಹಣ್ಣಿನಂತಹ ಪ್ರಿಯವಾದ ಹಣ್ಣನ್ನು ಬೆಳೆಯುವ ಕೆಲಸ ಅತ್ಯಂತ ಪವಿತ್ರವಾದುದು. ಒಬ್ಬ ವ್ಯಕ್ತಿಯು ಮಾಗಿದ ಮತ್ತು ಸಿಹಿಯಾದ ಮಾವಿನ ಹಣ್ಣನ್ನು ತಿನ್ನುವುದನ್ನು ನೋಡುವುದರಲ್ಲಿ ನನಗೆ ಸಿಗುವ ಖುಷಿ ಮತ್ತೊಂದಿಲ್ಲ. ಜಗತ್ತಿಗೆ ಸ್ವಲ್ಪ ಸಂತೋಷ ಮತ್ತು ಮಾಧುರ್ಯವನ್ನು ಹಂಚುವುದೇ ನನ್ನ ಗುರಿಯಾಗಿದೆ. ಅದನ್ನು ಮಾಡಲು ಮಾವಿನಹಣ್ಣಿನ್ನು ಬೆಳೆಸುವುದಕ್ಕಿಂತ ಉತ್ತಮವಾದ ಮಾರ್ಗ ಯಾವುದು ಎಂದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *