ಕಂಟಕ ನಿವಾರಿಸುವ ಜ್ಯೋತಿಷಿಗಳಿಗೇ ಸಂಕಷ್ಟ!

ಬೆಂಗಳೂರು: ಕಷ್ಟ ಬಂದಾಗ ಜನ ಜ್ಯೋತಿಷ್ಯರ ಬಳಿ ಓಡುತ್ತಿದ್ದು, ಇದೀಗ ಜ್ಯೋತಿಷ್ಯರೇ ಸಂಕಷ್ಟಕ್ಕೆ ಸಿಲುಕಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಹೌದು. ಜನ ಕಷ್ಟ ಬಂದಾಗ ಮನೆಯಲ್ಲಿ ತೊಂದರೆಯಾದಾಗ ದೇವರು ದಿಂಡ್ರು ಎಂದು ಹೋಗೋದು ಸಾಮಾನ್ಯ. ಅದೇ ರೀತಿ ಭವಿಷ್ಯ ಹೇಳೋ ಜ್ಯೋತಿಷಿಗಳ ಮುಂದೆ ಹೋಗಿ ಪರಿಹಾರ ಮಾಡಿ ಕೊಡಿ ಎಂದು ಕೇಳೋದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನ ವಿಚಾರವಾದಿಗಳು ವಿರೋಧಿಸುತ್ತಿದ್ದಿದ್ದು ಹಳೆ ಕತೆ. ಈಗ ಬುದ್ಧಿಜೀವಿಗಳು ಹೊಸ ವರಸೆಯೊಂದನ್ನ ಮುಂದಿಟ್ಟಿದ್ದಾರೆ.

ಜ್ಯೋತಿಷಿಗಳು ಹೇಳೋ ಭವಿಷ್ಯಕ್ಕೆ ಹಾಗೂ ಮಾಡೋ ನಾನಾ ಪೂಜೆ ಪುನಸ್ಕಾರಕ್ಕೆ ಲಕ್ಷಾಂತರ ಹಣ ಪಡೆಯುತ್ತಾರೆ. ಅದಕ್ಕೆಲ್ಲ ಬಿಲ್ ನೀಡಬೇಕು. ಒಂದು ವೇಳೆ ಪೂಜೆಯಿಂದ ಪರಿಹಾರ ಸಿಗಲಿಲ್ಲ ಅಂದರೆ ಪಡೆದ ಬಿಲ್ ಇಟ್ಕೊಂಡು ಗ್ರಾಹಕರ ವೇದಿಕೆಯಲ್ಲಿ ಕೇಸ್ ಹಾಕಬಹುದು. ಈ ಬಗ್ಗೆ ಮುಜರಾಯಿ ಇಲಾಖೆಗೆ ಅರ್ಜಿ ಹಾಕಲು ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ಮುಂದಾಗಿದ್ದಾರೆ.

ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ಹೇಳಿಕೆಗೆ ಶಾಸ್ತ್ರಜ್ಞರು ಕೆಂಡಾಮಂಡಲರಾಗಿದ್ದಾರೆ. ಧಾರ್ಮಿಕ ಕಾರ್ಯ, ಪೌರೋಹಿತ ಮಾಡೋರಿಗೆ ಯಾವುದೇ ಟ್ಯಾಕ್ಸ್ ಇರುವುದಿಲ್ಲ ಎಂದು ಸಂವಿಧಾನದಲ್ಲೇ ಹೇಳಿದೆ. ಈ ವಿಚಾರವಾದಿಗಳಿಗೆ ಮಾಡಲು ಕೆಲಸವಿಲ್ಲ ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪಗಳನ್ನ ಮಾಡುತ್ತಾರೆ ಎಂದು ಜ್ಯೋತಿಷಿ ಕಮಲಾಕರ್ ಭಟ್ ಗರಂ ಆಗಿದ್ದಾರೆ.

ಒಟ್ಟಿನಲ್ಲಿ ದೇವರು ದಿಂಡ್ರು ಹೆಸರಲ್ಲಿ ಜನರ ಕಂಟಕ ನಿವಾರಿಸುತ್ತಿದ್ದ ಜ್ಯೋತಿಷಿಗಳಿಗೆ ಇದೀಗ ಸಂಕಷ್ಟ ಎದುರಾಗಿರೋದು ವಿಪರ್ಯಾಸವಾಗಿದೆ.

Comments

Leave a Reply

Your email address will not be published. Required fields are marked *