ರಶ್ಮಿಕಾ ಬಳಿಕ ಸಕ್ಸಸ್‌ಗಾಗಿ ಜ್ಯೋತಿಷಿ ಮೊರೆ ಹೋದ ನಿಶ್ವಿಕಾ ನಾಯ್ಡು

ಡ್ಡೆಹುಲಿ, ಜಂಟಲ್‌ಮ್ಯಾನ್ ಸಿನಿಮಾ ಖ್ಯಾತಿಯ ನಿಶ್ವಿಕಾ ನಾಯ್ಡು (Nishvika Naidu) ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಳಿ ಸಕ್ಸಸ್‌ಗಾಗಿ ರಶ್ಮಿಕಾ ನಂತರ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಇದರ ವಿಡಿಯೋವನ್ನು ಜ್ಯೋತಿಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ನಿಶ್ವಿಕಾ ಈಗ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆಯ ಕಾರ್ಯದ ಬಳಿಕ ನಟಿಯ ಕುರಿತು ಮಾತನಾಡಿರುವ ವೇಣು ಸ್ವಾಮಿ, ನಿಶ್ವಿಕಾ ಕನ್ನಡದ ನಟಿ, ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಪ್ರಭುದೇವ ಅವರೊಂದಿಗೆ ಡ್ಯಾನ್ಸ್ ಮಾಡೋದು ಸುಮ್ಮನೆ ಅಲ್ಲ. ಪ್ರಭುದೇವ ಅವರಿಗೆ ಸಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನಿಶ್ವಿಕಾ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ನಿಶ್ವಿಕಾಗೆ ಶುಭವಾಗಲಿ ಎಂದಿದ್ದಾರೆ.

ನಿಶ್ವಿಕಾ ಜಾತಕವನ್ನು ನಾನು ನೋಡಿದ್ದೀನಿ, ಅವರು ಒಳ್ಳೆಯ ಜಾತಕವನ್ನು ಹೊಂದಿದ್ದಾರೆ. ತೆಲುಗಿನಲ್ಲೂ (Tollywood) ಖ್ಯಾತಿ ಪಡೆದುಕೊಳ್ಳಬೇಕು. ಸ್ಟಾರ್ ಆಗಿ ಬೆಳೆಯುವಂತಹ ಜಾತಕವನ್ನು ಅವರು ಹೊಂದಿದ್ದಾರೆ. ಶೀಘ್ರವೇ ಅವರಿಗೆ ಯಶಸ್ಸು ಅಂತ ಪ್ರಾರ್ಥನೆ ಮಾಡ್ತೇನೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.


ಬಳಿಕ ನಿಮ್ಮ ಹಾರೈಕೆ ಇದ್ದರೆ ಖಂಡಿತ ಯಶಸ್ವಿ ಆಗ್ತೀನಿ ಅಂತ ನಂಬಿಕೆ ಇದೆ. ಧನ್ಯವಾದ ಎಂದು ಕಾಲಿಗೆ ನಮಸ್ಕಾರ ಮಾಡಿ ಆರ್ಶೀವಾದ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಬ್ರೇಕ್ ಬಳಿಕ ಮತ್ತೆ ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ

ಕೆಲ ವರ್ಷಗಳ ಹಿಂದೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದರು. ಈಗ ಅವರು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಕೂಡ ಪೂಜೆ ಮಾಡಿಸಿದರು. ಅವರು ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಈಗ ಅದೇ ಹಾದಿಯಲ್ಲಿ ನಿಶ್ವಿಕಾ ಹೆಜ್ಜೆ ಇಟ್ಟಿದ್ದಾರೆ.