ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ಸೆನ್ಸೇಷನ್ ಕಲಾವಿದ ಕಿಲಿ ಪೌಲ್ ಮೇಲೆ ಮಾರಣಾಂತಿಕ ಹಲ್ಲೆ

ಸೋಷಿಯಲ್ ಮೀಡಿಯಾಗಳು ಮೂಲಕ, ಅದರಲ್ಲೂ ಲಿಪ್ ಸಿಂಕ್ ಕಲಾವಿದನಾಗಿದ್ದ ಕಿಲಿ ಪೌಲ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆಫ್ರಿಕಾದ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಆಗಿರುವ ಕಿಲಿ ಪೌಲ್, ಹೆಚ್ಚೆಚ್ಚು ರೀಲ್ಸ್ ಮತ್ತು ಲಿಪ್ ಸಿಂಕ್ ಹಾಡುಗಳ ಮೂಲಕ ಫೇಮಸ್ ಆಗಿದ್ದವರು. ಕನ್ನಡದ ಕೆಜಿಎಫ್ 2 ಸಿನಿಮಾದ ಹಾಡಿಗೂ ಅವರು ಲಿಪ್ ಸಿಂಕ್ ಮಾಡಿದ್ದರು. ಕಚ್ಚಾ ಬಾದಾಮ್ ಸೇರಿದಂತೆ ಹಲವು ಗೀತೆಗಳಿಗೆ ತುಟಿಚಲನೆ ಕೂಡಿಸಿ ಫೇಮಸ್ ಆದವರು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

ತಮ್ಮ ಮೇಲಿನ ದಾಳಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಲಿ ಪೌಲ್, ‘ಐದು ಜನ ದುಷ್ಕರ್ಮಿಗಳು ಏಕಾಏಕಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ಕೈಗೆ ಪೆಟ್ಟಾಗಿದೆ. ದೇಹದ ವಿವಿಧ ಭಾಗಗಳಿಗೂ ಏಟಾಗಿದೆ. ಹಾಗಾಗಿ ನನಗಾಗಿ ಪ್ರಾರ್ಥಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಅಲ್ಲದೇ ಅವರು ಬಚಾವ್ ಆಗಿದ್ದು ಹೇಗೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಇಬ್ಬರೂ ಭಾರತದ ಅದೆಷ್ಟೋ ಹಾಡುಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಭಾರತೀಯ ನಾನಾ ಭಾಷೆಗಳ ಹಾಡಿಗೆ ಅವರು ಸಂಭ್ರಮಿಸಿದ್ದಾರೆ. ಈ ಜೋಡಿಯ ಬಹುತೇಕ ಹಾಡುಗಳು ಫೇಮಸ್ ಕೂಡ ಆಗಿವೆ. ಅದರಲ್ಲೂ ಇನ್ಸ್ಟಾದಲ್ಲಿ ಅವರು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

ಇವರ ಜನಪ್ರಿಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದರು. ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಿಗಳು ಕನ್ನಡದ ಹಾಡಿಗೂ ಲಿಪ್ ಸಿಂಕ್ ಮಾಡುವಂತೆ ಕೇಳಿದ್ದರು. ಪ್ರಧಾನಿ ಮನವಿ ಮೇರೆಗೆ ಭಾರತೀಯ ಭಾಷೆಯ ಅನೇಕ ಗೀತೆಗಳನ್ನು ಹಾಡಿದ್ದರು.

ತಮ್ಮ ಮೇಲಿನ ಹಲ್ಲೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಷ್ಟೇ ಅಲ್ಲ, ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಅವರ ಬೆರಳಿಗೆ ಮತ್ತು ಇತರ ಕಡೆ ಗಾಯಗಳಾಗಿವೆ. ಅವರೇ ಹೇಳುವಂತೆ ಚಾಕುವಿನಿಂದ ಮತ್ತು ದೊಣ್ಣೆಯಿಂದಲೂ ಹಲ್ಲೆ ಮಾಡಲಾಗಿದೆಯಂತೆ. ಕೈಗೆ ಐದು ಹೊಲಿಗೆ ಹಾಕಲಾಗಿದೆ ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *